alex Certify 21 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ 2ನೇ ಪಟ್ಟಿ ಅಂತಿಮ: ಇಲ್ಲಿದೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

21 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ 2ನೇ ಪಟ್ಟಿ ಅಂತಿಮ: ಇಲ್ಲಿದೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಬೆಂಗಳೂರು: 21 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಶುಕ್ರವಾರ ಅಂತಿಮಗೊಳ್ಳಲಿದ್ದು, ಸೋಮವಾರ ಬಿಡುಗಡೆಯಾಗುವುದು ಬಹುತೇಕ ಖಚಿತವೆನ್ನಲಾಗಿದೆ.

ಕಗ್ಗಂಟಾಗಿರುವ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ ಕಾಂಗ್ರೆಸ್ ನಾಯಕರು ಅಂತಿಮಗೊಳಿಸಿ ಕೇಂದ್ರೀಯ ಚುನಾವಣೆ ಸಮಿತಿಗೆ ಕಳುಹಿಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯ ಕೇಂದ್ರೀಯ ಚುನಾವಣಾ ಸಮಿತಿ ಅನುಮೋದನೆ ನಂತರ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ರಾಜ್ಯದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಇದೀಗ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ:

ಉಡುಪಿ –ಚಿಕ್ಕಮಗಳೂರು: ಜಯಪ್ರಕಾಶ್ ಹೆಗಡೆ

ದಕ್ಷಿಣ ಕನ್ನಡ: ಪದ್ಮರಾಜ್

ಚಿತ್ರದುರ್ಗ: ಬಿ.ಎನ್. ಚಂದ್ರಪ್ಪ

ಚಿಕ್ಕಬಳ್ಳಾಪುರ: ರಕ್ಷಾ ರಾಮಯ್ಯ

ರಾಯಚೂರು: ಜಿ. ಕುಮಾರ ನಾಯಕ

ದಾವಣಗೆರೆ: ಲತಾ ಮಲ್ಲಿಕಾರ್ಜುನ

ಉತ್ತರ ಕನ್ನಡ: ಅಂಜಲಿ ನಿಂಬಾಳ್ಕರ್

ಬಾಗಲಕೋಟೆ: ಸಂಯುಕ್ತ ಪಾಟೀಲ್

ಹುಬ್ಬಳ್ಳಿ- ಧಾರವಾಡ: ವಿನೋದ್ ಅಸೂಟಿ

ಚಿಕ್ಕೋಡಿ: ಪ್ರಿಯಾಂಕಾ ಜಾರಕಿಹೊಳಿ

ಬೆಳಗಾವಿ: ಮೃಣಾಲ್ ಹೆಬ್ಬಾಳ್ಕರ್

ಬೆಂಗಳೂರು ದಕ್ಷಿಣ: ಸೌಮ್ಯ ರೆಡ್ಡಿ

ಬೆಂಗಳೂರು ಉತ್ತರ: ಪ್ರೊ. ರಾಜೀವ್ ಗೌಡ

ಬೆಂಗಳೂರು ಸೆಂಟ್ರಲ್: ಮನ್ಸೂರ್ ಅಲಿ ಖಾನ್

ಕಲಬುರಗಿ: ರಾಧಾಕೃಷ್ಣ

ಬಳ್ಳಾರಿ: ವೆಂಕಟೇಶ ಪ್ರಸಾದ್

ಚಾಮರಾಜನಗರ: ಸುನಿಲ್ ಬೋಸ್

ಮೈಸೂರು: ಎಂ. ಲಕ್ಷ್ಮಣ್

ಕೋಲಾರ: ಕೆ.ಹೆಚ್. ಮುನಿಯಪ್ಪ/ ಡಾ. ಎಲ್. ಹನುಮಂತಯ್ಯ

ಕೊಪ್ಪಳ: ರಾಜಶೇಖರ ಹಿಟ್ನಾಳ್/ ಅಮರೇಗೌಡ ಬಯ್ಯಾಪುರ

ಬೀದರ್: ರಾಜಶೇಖರ ಪಾಟೀಲ/ ಸಾಗರ್ ಬಿ. ಖಂಡ್ರೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...