alex Certify BIG NEWS: ಹೊಸ ವರ್ಷಾಚರಣೆ; ಸಂಭ್ರಮದಲ್ಲಿ ಮುಳುಗಿ ತೇಲಾಡುವವರಿಗೆ ಪೊಲಿಸರಿಂದ ಆಂಬುಲೆನ್ಸ್ ವ್ಯವಸ್ಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹೊಸ ವರ್ಷಾಚರಣೆ; ಸಂಭ್ರಮದಲ್ಲಿ ಮುಳುಗಿ ತೇಲಾಡುವವರಿಗೆ ಪೊಲಿಸರಿಂದ ಆಂಬುಲೆನ್ಸ್ ವ್ಯವಸ್ಥೆ

ಬೆಂಗಳೂರು: ಹೊಸ ವರ್ಷಚಾರಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಬೆಂಗಳೂರು ಪೊಲೀಸರು ಅಲರ್ಟ್ ಆಗಿದ್ದು, ವರ್ಷಾಚರಣೆ ಸಂಭ್ರಮದ ನಡುವೆ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ.

ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಮುಳುಗಿ ಟೈಟ್ ಆಗಿ ತೂರಾಡುವವರನ್ನು ರಕ್ಷಿಸಲು ಬೆಂಗಳೂರು ಆಗ್ನೇಯ ಪೊಲೀಸರು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಸಂಭ್ರಮದ ಅಮಲಲ್ಲಿ ತೇಲುವ ಯಾರೇ ಆದರೂ ಅವರಿಗೆ ಬೆಂಗಳೂರು ಆಗ್ನೇಯ ಪೊಲೀಸ್ ವಿಭಾಗ ಆಂಬುಲೆನ್ಸ್ ವ್ಯವಸ್ಥೆ ಮಾಡಿದೆ. ಡಿಸೆಂಬರ್ 31ರ ರಾತ್ರಿ ಮಾತ್ರ ಈ ಆಂಬುಲೆನ್ಸ್ ಸೇವೆ ಲಭ್ಯವಿರಲಿದೆ. ಕೋರಮಂಗಲ, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಹೆಚ್ ಎಸ್ ಆರ‍್ ಲೇಔಟ್ ನಲ್ಲಿ ಸಂಪೂರ್ಣ ಭದ್ರತೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಆಗ್ನೇಯ ವಿಭಾಗದಲ್ಲಿ ಇರುವ 108 ಪಬ್, ರೆಸ್ಟೋರೆಂಟ್ ಗಳ ಮುಂದೆಯೂ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಪಬ್ ರೆಸ್ಟೋರೆಂಟ್ ಗಳಿಗೆ ಎಂಟ್ರಿಯಾಗುವ ಪ್ರತಿಯೊಬ್ಬರ ಫೋಟೋ, ಮಾಹಿತಿ ವಿವರಗಳನ್ನು ಪಡೆಯಲಾಗುತ್ತಿದೆ.

ವರ್ಷಾಚರಣೆಯಲ್ಲಿ ಟೈಟ್ ಆಗಿ ಪ್ರಜ್ಞೆ ತಪ್ಪಿ ಬೀಳುವವರಿಗೆ, ಕುಡಿದು ಕುಣಿದು ಗಾಯ ಮಾಡಿಕೊಂಳ್ಳುವವರಿಗೆ, ಸೆಲೆಬ್ರೇಷನ್ ವೇಳೆ ಆಕಸ್ಮಿಕವಾಗಿ ಅವಘಡವೇನಾದರೂ ಸಂಭವಿಸಿದರೆ, ಯಾರಿಗಾದರೂ ಆರೋಗ್ಯ ಸಮಸ್ಯೆ ಎದುರಾದಲ್ಲಿ ಸುರಕ್ಷತೆಗಾಗಿ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.

ತಕ್ಷಣ ಅಂತವರನ್ನು ಆಂಬುಲೆನ್ಸ್ ಮೂಲಕ ಸಾಗಿಸಿ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಖಾಸಗಿ ಆಸ್ಪತ್ರೆಗಳ ಜೊತೆಯೂ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...