alex Certify BIG NEWS: ವಿಶ್ವದ ಅತಿದೊಡ್ಡ ಏರ್​ಕ್ರಾಫ್ಟ್​ AN225 ನ್ನು ಧ್ವಂಸಗೊಳಿಸಿದ ರಷ್ಯಾ; ಅಧಿಕೃತ ಮಾಹಿತಿ ಹಂಚಿಕೊಂಡ ಉಕ್ರೇನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿಶ್ವದ ಅತಿದೊಡ್ಡ ಏರ್​ಕ್ರಾಫ್ಟ್​ AN225 ನ್ನು ಧ್ವಂಸಗೊಳಿಸಿದ ರಷ್ಯಾ; ಅಧಿಕೃತ ಮಾಹಿತಿ ಹಂಚಿಕೊಂಡ ಉಕ್ರೇನ್

ಉಕ್ರೇನ್​ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ನಡೆದ ಗಮನಾರ್ಹ ಬೆಳವಣಿಗೆಯೊಂದರಲ್ಲಿ ವಿಶ್ವದ ಅತಿದೊಡ್ಡ ವಿಮಾನ AN225 ಧ್ವಂಸಗೊಂಡಿದೆ. ಈ ಬಗ್ಗೆ ಈಗಾಗಲೇ ಸಾಕಷ್ಟು ಊಹಾಪೋಹಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಇದೀಗ ಉಕ್ರೇನ್​ನ ವಿದೇಶಾಂಗ ಸಚಿವರು ಆರು ಎಂಜಿನ್​ಗಳ ಕಾರ್ಗೋ ವಿಮಾನವನ್ನು ರಷ್ಯಾ ನಾಶಪಡಿಸಿದೆ ಎಂಬ ವಿಚಾರವನ್ನು ಧೃಡಪಡಿಸಿದ್ದಾರೆ.

ಉಕ್ರೇನ್​ನ ವಿದೇಶಾಂಗ ವ್ಯವಹಾರಗಳ ಸಚಿವ ಡಿಮಿಟ್ರೋ ಕುಲೆಬಾ ಈ ವಿಚಾರವಾಗಿ ಟ್ವೀಟ್​ ಮಾಡಿದ್ದು , AN225 ‘ಮ್ರಿಯಾ’ (ಉಕ್ರೇನಿಯನ್​ ಭಾಷೆಯಲ್ಲಿ ಕನಸು ಎಂದರ್ಥ), ವಿಶ್ವದ ಅತಿದೊಡ್ಡ ಏರ್​ಕ್ರಾಫ್ಟ್​ ಆಗಿತ್ತು. ರಷ್ಯಾ ನಮ್ಮ ಮ್ರಿಯಾವನ್ನು ನಾಶ ಮಾಡಿರಬಹುದು. ಆದರೆ ಬಲವಾದ , ಮುಕ್ತ ಹಾಗೂ ಪ್ರಜಾಪ್ರಭುತ್ವದ ಯುರೋಪಿಯನ್​ ರಾಜ್ಯದ ನಮ್ಮ ಕನಸನ್ನು ನಾಶ ಮಾಡಲು ರಷ್ಯಾದಿಂದ ಎಂದಿಗೂ ಸಾಧ್ಯವಿಲ್ಲ, ನಾವು ಮೇಲುಗೈ ಸಾಧಿಸುತ್ತೇವೆ ಎಂದು ಬರೆದಿದ್ದಾರೆ.

AN225 ವಿಮಾನವನ್ನು ನಿರ್ಮಿಸಿದ ಮತ್ತು ನಿರ್ವಹಿಸುವ ಕಂಪನಿ ಆಂಟೊನೊವ್, AN-225 ಅನ್ನು ತಜ್ಞರು ಪರಿಶೀಲಿಸುವವರೆಗೆ, ಅವರು ವಿಮಾನದ ತಾಂತ್ರಿಕ ಸ್ಥಿತಿಯ ಬಗ್ಗೆ ವರದಿ ಮಾಡಲು ಸಾಧ್ಯವಿಲ್ಲ ಎಂದು ಟ್ವೀಟ್​ ಮಾಡಿದೆ.

— Dmytro Kuleba (@DmytroKuleba) February 27, 2022

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...