alex Certify BIG NEWS: ವಿದೇಶದಲ್ಲಿ ಮನ್ಮಿತ್ ರೈ ಭರ್ಜರಿ ಪಾರ್ಟಿ; ಯುವತಿಯರ ಮೇಲೆ ಕಂತೆ ಕಂತೆ ಹಣ ಎಸೆದು ಮೋಜು ಮಸ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿದೇಶದಲ್ಲಿ ಮನ್ಮಿತ್ ರೈ ಭರ್ಜರಿ ಪಾರ್ಟಿ; ಯುವತಿಯರ ಮೇಲೆ ಕಂತೆ ಕಂತೆ ಹಣ ಎಸೆದು ಮೋಜು ಮಸ್ತಿ

ಮಂಗಳೂರು; ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಮನ್ಮಿತ್ ರೈ ಇದೀಗ ವಿದೇಶದಲ್ಲಿ ಭರ್ಜರಿ ಪಾರ್ಟಿಯಲ್ಲಿ ಭಾಗಿಯಾಗಿದ್ದು, ಮೋಜು ಮಸ್ತಿಯಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದೆ.

ಗುಣರಂಜನ್ ಶೆಟ್ಟಿ ಹತ್ಯೆಗೆ ಸಂಚು ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ, ನಾನು ವಿದೇಶದಲ್ಲಿದ್ದೇನೆ ಎಂದು ಹೇಳಿಕೆ ನೀಡಿದ್ದ ಮನ್ಮಿತ್ ರೈ, ಇದೀಗ ಥೈಲ್ಯಾಂಡ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಭರ್ಜರಿ ಪಾರ್ಟಿ ನಡೆಸಿ, ಪಾರ್ಟಿಯಲ್ಲಿ ಯುವತಿಯರ ಮೇಲೆ ಕಂತೆ ಕಂತೆ ಹಣ ಎಸೆದಿದ್ದಾರೆ.

ದಿ.ಮುತ್ತಪ್ಪ ರೈ ಸಂಬಂಧಿಕರೂ ಆಗಿರುವ ಮನ್ಮಿತ್ ರೈ ಹಾಗೂ ಗುಣರಂಜನ್ ಶೆಟ್ಟಿ ಈ ಹಿಂದೆ ಮುತ್ತಪ್ಪ ರೈ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಬಳಿಕ ಇಬ್ಬರೂ ದೂರವಾಗಿದ್ದರು ಎನ್ನಲಾಗಿದೆ. ಇದೀಗ ಸ್ನೇಹಿತರೊಂದಿಗೆ ಥೈಲ್ಯಾಂಡ್ ಗೆ ತೆರಳಿರುವ ಮನ್ಮಿತ್ ರೈ ಹುಟ್ಟುಹಬ್ಬಕ್ಕಾಗಿ ಪಾರ್ಟಿ ಮಾಡಿದ್ದು, ಹುಡುಗಿಯರ ಮೇಲೆ ಹಣ ಎಸೆದು ನೃತ್ಯ ಮಾಡಿ ಸಂಭ್ರಮಿಸಿದ್ದಾರೆ.

ವಿಡಿಯೋ ಕೃಪೆ: ಟಿವಿ9

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...