alex Certify BIG NEWS: ಲಸಿಕೆ ಪ್ರಮಾಣ ಪತ್ರದ ಮೇಲೆ ಪ್ರಧಾನಿ ಫೋಟೊ; ಹಿಂಪಡೆಯುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾ​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಲಸಿಕೆ ಪ್ರಮಾಣ ಪತ್ರದ ಮೇಲೆ ಪ್ರಧಾನಿ ಫೋಟೊ; ಹಿಂಪಡೆಯುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾ​

ಕೋವಿಡ್​ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿಯ ಫೋಟೋವನ್ನು ಬಳಕೆ ಮಾಡುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಕೇರಳ ಹೈಕೋರ್ಟ್​ನ ವಿಭಾಗೀಯ ಪೀಠವು ತಳ್ಳಿ ಹಾಕಿದೆ.

ಮೇಲ್ಮನವಿಯನ್ನು ಆಲಿಸಿದ ಏಕ ಸದಸ್ಯ ಪೀಠವು ಅರ್ಜಿದಾರನನ್ನು ದೂಷಿಸಿದ್ದು ಮಾತ್ರವಲ್ಲದೇ ಅವರ ಮೇಲೆ ಭಾರೀ ದಂಡವನ್ನು ವಿಧಿಸುವವರೆಗೂ ಹೋಗಿತ್ತು. ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್​, ಫೋಟೋಗಳನ್ನು ಬಳಕೆ ಮಾಡುವುದನ್ನು ಜಾಹೀರಾತು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಕೊರೊನಾ ಲಸಿಕೆ ಕುರಿತಂತೆ ಜನರಿಗೆ ಸಂದೇಶವನ್ನು ನೀಡುವ ಹಕ್ಕು ಪ್ರಧಾನ ಮಂತ್ರಿಗೆ ಇದೆ ಎಂದು ಹೇಳಿದ ಹೈಕೋರ್ಟ್​ ವಿಭಾಗೀಯ ಪೀಠ ಅರ್ಜಿದಾರರಿಗೆ ದುರುದ್ದೇಶ ಇರುವಂತೆ ಕಾಣುತ್ತಿದೆ ಎಂದು ಹೇಳಿದೆ.

ಕೋವಿಡ್​ ಲಸಿಕೆಗಳ ಮೇಲೆ ಪ್ರಧಾನಿ ಮೋದಿ ಫೋಟೋವನ್ನು ಬಳಕೆ ಮಾಡುವುದು ಕೇಂದ್ರದಲ್ಲಿರುವ ಆಡಳಿತಾರೂಢ ಪಕ್ಷಕ್ಕೆ ಪ್ರಚಾರ ನೀಡಿದಂತೆ ಆಗುತ್ತದೆ. ಹೀಗಾಗಿ ಕೊರೊನಾ ಲಸಿಕೆಗಳ ಪ್ರಮಾಣ ಪತ್ರದಿಂದ ಪ್ರಧಾನಿ ಮೋದಿ ಫೋಟೋವನ್ನು ತೆಗೆದು ಹಾಕಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...