alex Certify BIG NEWS: ರಸ್ತೆ ಬದಿಗೆ ಪಲ್ಟಿಯಾದ ಶಾಲಾ ಬಸ್; 10ಕ್ಕೂ ಹೆಚ್ಚು ಮಕ್ಕಳಿಗೆ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಸ್ತೆ ಬದಿಗೆ ಪಲ್ಟಿಯಾದ ಶಾಲಾ ಬಸ್; 10ಕ್ಕೂ ಹೆಚ್ಚು ಮಕ್ಕಳಿಗೆ ಗಾಯ

ಹಾಸನ: ಖಾಸಗಿ ಶಾಲಾ ಬಸ್ ಏಕಾಏಕಿ ರಸ್ತೆಯ ಪಕ್ಕದಲ್ಲಿ ಉರುಳಿ ಬಿದ್ದ ಘಟನೆ ಹಾಸನ ಜಿಲ್ಲೆಯ ಉಗನೆ ಗ್ರಾಮದ ಬಳಿ ನಡೆದಿದೆ.

ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ಪಲ್ಟಿಯಾಗಿದೆ. ಬಸ್ ನಲ್ಲಿ 25 ಮಕ್ಕಳು ಇದ್ದರು. ಬಸ್ ಪಲ್ಟಿಯಾದ ಪರಿಣಾಮ 10ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹೊಸ ರಸ್ತೆ ಕಾಮಗಾರಿ ಇತ್ತೀಚೆಗಷ್ಟೇ ಮುಗಿದಿದ್ದು, ಕಳಪೆ ಕಾಮಗಾರಿಯಿಂದಾಗಿ ರಸ್ತೆಯಲ್ಲಿ ಸಮರ್ಪಕವಾಗಿ ಸಮತಟ್ಟು ಮಾಡದೇ ಹಾಗೇ ಬಿಡಲಾಗಿದೆ. ಶಾಲಾ ವಾಹನ ಅಪಘಾತಕ್ಕೆ ರಸ್ತೆ ದುರವಸ್ಥೆಯೇ ಕಾರಣ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...