alex Certify BIG NEWS: ರಷ್ಯಾ-ಉಕ್ರೇನ್ ಯುದ್ದ ಆರಂಭವಾಗುತ್ತಿದ್ದಂತೆಯೇ ಬಿಟ್‌ ಕಾಯಿನ್ ವಹಿವಾಟಿನಲ್ಲಿ ಭಾರಿ ಕುಸಿತ; ಕ್ರಿಪ್ಟೋ ಮಾರುಕಟ್ಟೆಯಲ್ಲಿ ಹೆಚ್ಚಾದ ಆತಂಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಷ್ಯಾ-ಉಕ್ರೇನ್ ಯುದ್ದ ಆರಂಭವಾಗುತ್ತಿದ್ದಂತೆಯೇ ಬಿಟ್‌ ಕಾಯಿನ್ ವಹಿವಾಟಿನಲ್ಲಿ ಭಾರಿ ಕುಸಿತ; ಕ್ರಿಪ್ಟೋ ಮಾರುಕಟ್ಟೆಯಲ್ಲಿ ಹೆಚ್ಚಾದ ಆತಂಕ…!

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ನಂತರ ಜಾಗತಿಕ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು ಡೇಂಜರ್‌ ಝೋನ್‌ ನಲ್ಲಿ ವಹಿವಾಟಾಗುತ್ತಿದೆ.‌ ಇದರಿಂದಾಗಿ ಬಿಟ್‌ಕಾಯಿನ್ ಗುರುವಾರ ಕುಸಿತ ಕಂಡಿದೆ.

ವಿಶ್ವದ ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿ ಬಿಟ್‌ಕಾಯಿನ್ ಶೇಕಡಾ 8 ರಷ್ಟು ಕುಸಿದು $34,932.07 ಆಗಿದೆ. ಮಾರುಕಟ್ಟೆ ಬಂಡವಾಳೀಕರಣದ ಮೂಲಕ, ಎರಡನೇ ಅತಿ ದೊಡ್ಡ ಕ್ರಿಪ್ಟೋಕರೆನ್ಸಿ ಎಥೆರಿಯಮ್, 10 ಪ್ರತಿಶತದಷ್ಟು ಕುಸಿತ ಕಂಡು $2,376.19 ಗೆ ಇಳಿದಿದೆ‌.

ಡಾಡ್ಜ್‌ಕಾಯಿನ್‌ 12%, ಶಿಬಾ ಇನು 10%, ಪೋಲ್ಕಾಡೋಟ್ 10% ಮತ್ತು ಪಾಲಿಗಾನ್ 12% ರಷ್ಟು ಕುಸಿತ ಕಂಡಿದೆ. ಇನ್ನುಳಿದಂತೆ XRP ಶೇಕಡಾ 9 ಕ್ಕಿಂತ ಕಡಿಮೆಯಾಗಿದೆ, ಟೆರ್ರಾ ಶೇಕಡಾ ಒಂದಕ್ಕಿಂತ ಕಡಿಮೆಯಾಗಿದೆ.

ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಏಕೆ ಕುಸಿದಿದೆ ಎಂದು ನೋಡುವುದಾದರೆ, ಕಳೆದ 24 ಗಂಟೆಗಳಲ್ಲಿ ಜಾಗತಿಕ ವ್ಯಾಪಾರದ ಪ್ರಮಾಣವು ಸುಮಾರು 191% ಕುಸಿದಿದೆ. ರಷ್ಯಾ ಉಕ್ರೇನ್ ವಿರುದ್ಧ ಯುದ್ಧವನ್ನು ಘೋಷಿಸಿದ ನಂತರ ಬಿಟ್‌ಕಾಯಿನ್, ಎಥೆರಿಯಮ್ ಮತ್ತು ಇತರ ಪ್ರಮುಖ ಆಲ್ಟ್‌ಕಾಯಿನ್‌ಗಳು ಕೆಂಪು ವಲಯದಲ್ಲಿ ವಹಿವಾಟಾಗುತ್ತಿವೆ ಎಂದು ಮುಡ್ರೆಕ್ಸ್ ಸಿಇಒ ಎಡುಲ್ ಪಟೇಲ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...