alex Certify BIG NEWS: ಮೂರು ವರ್ಷದ ಮಗುವನ್ನು ಕೊಂದು ನೇಣಿಗೆ ಶರಣಾದ ಟೆಕ್ಕಿ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮೂರು ವರ್ಷದ ಮಗುವನ್ನು ಕೊಂದು ನೇಣಿಗೆ ಶರಣಾದ ಟೆಕ್ಕಿ ಪತ್ನಿ

ಬೆಂಗಳೂರು: ಮೂರು ವರ್ಷದ ಪುಟ್ಟ ಕಂದಮ್ಮನ ಕತ್ತು ಬಿಗಿದು ಕೊಂದ ತಾಯಿ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.

ಮೂರು ವರ್ಷದ ಮಗಳು ರಿಯಾ ಹಾಗೂ 31 ವರ್ಷದ ದೀಪಾ ಮೃತರು. ಮೂರು ವರ್ಷದ ಮಗಳನ್ನು ಕೊಂದು ಬಳಿಕ ಡೆತ್ ನೋಟ್ ಬರೆದಿಟ್ಟಿರುವ ದೀಪಾ ತಾನೂ ಸಾವಿಗೆ ಶರಣಾಗಿದ್ದಾಳೆ. ಡೆತ್ ನೋಟ್ ನಲ್ಲಿ’ ನನ್ನ ಸಾವಿಗೆ ಯಾರೂ ಕಾರಣವಲ್ಲ, ಜೀವನವೇ ಹೊಲಸು. ನನ್ನನ್ನು ಕ್ಷಮಿಸು ಅಮ್ಮಾ…’ ಎಂದು ಬರೆದಿಟ್ಟಿದ್ದಾರೆ ಎನ್ನಲಾಗಿದೆ.

ಉಡುಪಿಯ ಬ್ರಹ್ಮಾವರ ಮೂಲದ ದೀಪಾ, 2017ರಲ್ಲಿ ಆದರ್ಶ್ ಎಂಬ ಸಾಫ್ಟ್ ವೇರ್ ಎಂಜಿನಿಯರ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಮೂರು ವರ್ಷದ ಮಗಳಿದ್ದಳು. ಮದುವೆಯಾದಾಗಿನಿಂದ ಮಂತ್ರಿ ಅಪಾರ್ಟ್ ಮೆಂಟ್ ನಲ್ಲಿ ದಂಪತಿ ವಾಸವಾಗಿದ್ದರು. ಇದೀಗ ದೀಪಾ ತನ್ನ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾಗಿದ್ದು, ಪೋಷಕರು ಕಂಗಾಲಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...