alex Certify BIG NEWS: ಮುಕೇಶ್ ಅಂಬಾನಿ ಸೆಕ್ಯೂರಿಟಿಯಲ್ಲಿ ಹೆಚ್ಚಳ; ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರಿಗೆ ಈಗ Z+ಶ್ರೇಣಿ ಭದ್ರತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮುಕೇಶ್ ಅಂಬಾನಿ ಸೆಕ್ಯೂರಿಟಿಯಲ್ಲಿ ಹೆಚ್ಚಳ; ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರಿಗೆ ಈಗ Z+ಶ್ರೇಣಿ ಭದ್ರತೆ

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಮುಕೇಶ್ ಅಂಬಾನಿ ಅವರ ಭದ್ರತೆಯನ್ನು ಕೇಂದ್ರ ಗೃಹ ಸಚಿವಾಲಯ ಹೆಚ್ಚಿಸಿದೆ. ಬೇಹುಗಾರಿಕಾ ಏಜೆನ್ಸಿಗಳ ಮಾಹಿತಿಯನ್ನು ಆಧರಿಸಿ ಭದ್ರತೆಯಲ್ಲಿ ಈ ಹೆಚ್ಚಳ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಮುಕೇಶ್ ಅಂಬಾನಿ ಅವರಿಗೆ ಈವರೆಗೆ Z ಶ್ರೇಣಿ ಭದ್ರತೆಯನ್ನು ನೀಡಲಾಗುತ್ತಿದ್ದು, ಈ ಹಿಂದೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಅವರ ಭದ್ರತೆಯನ್ನು ಹೆಚ್ಚಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಈಗ ಅವರಿಗೆ Z+ಭದ್ರತೆಯನ್ನು ನೀಡಲಾಗುತ್ತಿದ್ದು, ಇದು 55 ಮಂದಿಯ ತಂಡವನ್ನು ಹೊಂದಿದೆ.

ಐದು ಶ್ರೇಣಿಗಳಾದ X, Y, Z, Z+, SPG ಭದ್ರತೆಯನ್ನು ಅಗತ್ಯಾನುಸಾರ ವಿಐಪಿ ಹಾಗೂ ವಿವಿಐಪಿಗಳಿಗೆ, ಖ್ಯಾತ ಅಥ್ಲೆಟ್, ಸಿನಿ ತಾರೆಯರು ಮತ್ತು ರಾಜಕೀಯ ನಾಯಕರುಗಳಿಗೆ ಒದಗಿಸಲಾಗುತ್ತದೆ. Z+ಶ್ರೇಣಿಯಲ್ಲಿ 55 ಮಂದಿ ಭದ್ರತಾ ಸಿಬ್ಬಂದಿ ಇರಲಿದ್ದು, ಈ ಪೈಕಿ ಹತ್ತಕ್ಕೂ ಅಧಿಕ ಮಂದಿ ಎನ್ ಎಸ್ ಜಿ ಕಮಾಂಡೋಗಳು ಇರಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...