alex Certify BIG NEWS: ಮಂಕಿಪಾಕ್ಸ್ ಭೀತಿ; ಕಟ್ಟೆಚ್ಚರ ಘೋಷಿಸಿದ ಆರೋಗ್ಯ ಇಲಾಖೆ; ಸುತ್ತೋಲೆ ಪ್ರಕಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಂಕಿಪಾಕ್ಸ್ ಭೀತಿ; ಕಟ್ಟೆಚ್ಚರ ಘೋಷಿಸಿದ ಆರೋಗ್ಯ ಇಲಾಖೆ; ಸುತ್ತೋಲೆ ಪ್ರಕಟ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವ ಬೆನ್ನಲ್ಲೇ ಆರೋಗ್ಯ ಇಲಾಖೆ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಿದೆ.

ಮಂಕಿಪಾಕ್ಸ್ ಪ್ರಕರಣಕ್ಕೆ ದೇಶದಲ್ಲಿ ಮೊದಲ ಬಲಿಯಾಗಿದ್ದು, ಕೇರಳದ 22 ವರ್ಷದ ಯುವಕ ಸೋಂಕಿಗೆ ಬಲಿಯಾಗಿರುವುದು ದೃಢಪಟ್ಟಿದೆ. ಈ ಘಟನೆ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಆರೋಗ್ಯ ಇಲಾಖೆ ಅಲರ್ಟ್ ಘೋಷಿಸಿದೆ. ಈ ನಿಟ್ಟಿನಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಜಿಲ್ಲಾಡಳಿತಗಳಿಗೆ ಹಾಗೂ ಬಿಬಿಎಂಪಿಗೆ ಮಾರ್ಗಸೂಚಿ ಪ್ರಕಟಿಸಿ ಸುತ್ತೋಲೆ ಹೊರಡಿಸಿದ್ದಾರೆ.

ಮಂಕಿಪಾಕ್ಸ್ ಸೋಂಕು ಹರಡುವಿಕೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಕಣ್ಗಾವಲು, ಸಾಂಸ್ಥಿಕ ಐಸೋಲೇಷನ್ ಗಾಗಿ ಸೂಕ್ತ ಸ್ಥಳಗಳನ್ನು ಗೊತ್ತುಪಡಿಸುವುದು, ಕಡ್ಡಾಯ ಸಂಪರ್ಕ ಪತ್ತೆ ಮತ್ತು ಸ್ಯಾಂಪಲ್ ಗಳ ಪರೀಕ್ಷೆ ಕುರಿತಂತೆ ಆರೋಗ್ಯ ಇಲಾಖೆ ವತಿಯಿಂದ ಬಿಬಿಎಂಪಿ ಹಾಗೂ ಎಲ್ಲಾ ಜಿಲ್ಲಾಡಳಿತಗಳಿಗೆ ಸುತ್ತೋಲೆ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಕಡ್ಡಾಯವಾಗಿದ್ದು, ಆರೋಗ್ಯ ಕೇಂದ್ರಕ್ಕೆ ಬರುವವರಿಗೆ ಮಂಕಿಪಾಕ್ಸ್ ಲಕ್ಷಣವಿದ್ದರೆ ತಪಾಸಣೆ ಕೈಗೊಳ್ಳಬೇಕು ಹಾಗೂ ಸೋಂಕು ಕಂಡುಬಂದಲ್ಲಿ 21 ದಿನಗಳ ಕಾಲ ಐಸೋಲೇಷನ್ ಮಾಡಬೇಕು ಎಂದು ಬಿಬಿಎಂಪಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...