alex Certify BIG NEWS: ಪಾವಗಡ ಸೋಲಾರ್ ಪಾರ್ಕ್ 10 ಎಕರೆ ವಿಸ್ತರಿಸಲು ನಿರ್ಧಾರ; DCM ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಾವಗಡ ಸೋಲಾರ್ ಪಾರ್ಕ್ 10 ಎಕರೆ ವಿಸ್ತರಿಸಲು ನಿರ್ಧಾರ; DCM ಮಾಹಿತಿ

ಪಾವಗಡ: ಪಾವಗಡ ಸೋಲಾರ್ ಪಾರ್ಕ್ ನ್ನು 10 ಎಕರೆ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ತಿರುಮಣಿ ಬಳಿಯ ಸೋಲಾರ್ ಪಾರ್ಕ್ ಪರಿಶೀಲಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ರೈತರು ಮುಂದೆ ಬಂದರೆ ಸೋಲಾರ್ ಪಾರ್ಕ್ ವಿಸ್ತರಿಸಲು ನಿರ್ಧರಿಸಿದ್ದೇವೆ ಎಂದರು.

ಹೆಲಿಕಾಪ್ಟರ್ ಮೂಲಕ ಸೋಲಾರ್ ಪಾರ್ಕ್ ವೀಕ್ಷಿಸಿದ್ದೇವೆ. ಸೋಲಾರ್ ಪಾರ್ಕ್ ಗೆ ಭೂಮಿ ನೀಡಿದ ರೈತರಿಗೆ ಸಮಾಧಾನವಿದೆ. ಅಗ್ರಿಮೆಂಟ್ ನಂತೆ ಜಮೀನು ನೀಡಿದ ರೈತರ ಖಾತೆಗೆ ಹಣ ಹೋಗುತ್ತಿದೆ ಎದು ಹೇಳಿದರು. ಈ ವೇಳೆ ಇಂಧನ ಸಚಿವ ಕೆ.ಜೆ. ಜಾರ್ಜ್ ಉಪಸ್ಥಿತರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...