alex Certify BIG NEWS: ಪಾಕಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ; ಆತ್ಮಾಹುತಿ ಬಾಂಬ್ ದಾಳಿಗೆ ಐವರು ಸೈನಿಕರು ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಾಕಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ; ಆತ್ಮಾಹುತಿ ಬಾಂಬ್ ದಾಳಿಗೆ ಐವರು ಸೈನಿಕರು ಬಲಿ

ಇಸ್ಲಾಮಾಬಾದ್ : ಅಪ್ಘಾನಿಸ್ತಾನದಲ್ಲಿ ಕೈವಶಪಡಿಸಿಕೊಂಡಿರುವ ತಾಲಿಬಾನ್ ಉಗ್ರರು ಇದೀಗ ಪಾಕಿಸ್ತಾನದಲ್ಲೂ ಅಟ್ಟಹಾಸ ಮೆರೆಯುತ್ತಿದ್ದು, ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾರೆ.

ಪಾಕಿಸ್ತಾನದ ಬಲೋಚಿಸ್ತಾನ ಬಳಿಯ ಮುಸ್ಟಂಗ್ ರಸ್ತೆಯಲ್ಲಿನ ಚೆಕ್ ಪೋಸ್ಟ್ ಬಳಿ ತಾಲಿಬಾನಿಗಳು ಪಾಕ್ ಸೈನಿಕರನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಪಾಕಿಸ್ತಾನದ ಐವರು ಸೈನಿಕರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶೇಖ್ ಜೈದ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೈಕ್ ನಲ್ಲಿ ಬಂದ ಆತ್ಮಾಹುತಿ ದಾಳಿಕೋರ ಕಾನೂನು ಜಾರಿ ಸಂಸ್ಥೆಗೆ ಸೇರಿದ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ದಾಳಿಯಲ್ಲಿ ಮೃತಪಟ್ಟ ಸೈನಿಕರು ಪ್ಯಾರಾಮಿಲಿಟರಿ ಪಡೆಯ ಸಿಬ್ಬಂದಿಗಳೆಂದು ತಿಳಿದುಬಂದಿದೆ.

ಸ್ಫೋಟದ ಹೊಣೆ ಹೊತ್ತಿರುವ ಪಾಕಿಸ್ತಾನಿ ತಾಲಿಬಾನಿಗಳು, ದಾಳಿಯಲ್ಲಿ 25ಕ್ಕೂ ಹೆಚ್ಚು ಸೈನಿಕರನ್ನು ಹತ್ಯೆ ಗೈದಿರುವುದಾಗಿ ಹೇಳಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...