alex Certify BIG NEWS: ನಿಮಗೆ ತಾಕತ್ತು, ಧಮ್ ಇದ್ರೆ BJPಯನ್ನು ತಡೆದು ನಿಲ್ಲಿಸಿ; ಕಾಂಗ್ರೆಸ್ ನಾಯಕರಿಗೆ ಸಿಎಂ ಸವಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಿಮಗೆ ತಾಕತ್ತು, ಧಮ್ ಇದ್ರೆ BJPಯನ್ನು ತಡೆದು ನಿಲ್ಲಿಸಿ; ಕಾಂಗ್ರೆಸ್ ನಾಯಕರಿಗೆ ಸಿಎಂ ಸವಾಲು

ದೊಡ್ಡಬಳ್ಳಾಪುರ: ಜನಸ್ಪಂದನಾ ಸಮಾವೇಶಕ್ಕೆ ದಾಖಲೆ ಸಂಖ್ಯೆಯಲ್ಲಿ ಜನ ಸೇರಿದ್ದು, ಈ ವೇದಿಕೆಯಿಂದ ಇಡೀ ರಾಜ್ಯಕ್ಕೆ ಕೇಳುವಂತೆ ಸಂದೇಶ ನೀಡುತ್ತಿದ್ದೇನೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಮೇಲೆ ಜನರು ಇಟ್ಟಿರುವ ವಿಶ್ವಾಸಕ್ಕೆ ದ್ರೋಹ ಬಗೆಯಲ್ಲ ಎಂದು ಹೇಳಿದರು.

ಕಾಂಗ್ರೆಸ್ ನಾಯಕರಿಗೆ ಒಂದು ಮಾತು ಹೇಳುತ್ತೇನೆ. ನಿಮ್ಮ ಕನಸು ಕನಸಾಗಿಯೇ ಉಳಿಯಲಿದೆ. ರಾಜ್ಯದಲ್ಲಿ ನಾವು ಕಮಲವನ್ನು ಮತ್ತೆ ಅರಳಿಸುತ್ತೇವೆ. ತಾಕತ್ತಿದ್ದರೆ, ಧಮ್ಮಿದ್ರೆ ಬಿಜೆಪಿಯನ್ನು ತಡೆಯಿರಿ ನೋಡೋಣ ಎಂದು ಸವಾಲು ಹಾಕಿದರು.

2019ರಲ್ಲಿಯೇ ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗಬೇಕಿತ್ತು. ಆದರೆ ಕಾಂಗ್ರೆಸ್ ಹುನ್ನಾರದಿಂದಾಗಿ ಕೈತಪ್ಪಿತ್ತು. ಸಮ್ಮಿಶ್ರ ಸರ್ಕಾರದಿಂದ ಹೊರ ಬಂದ ಕಾಂಗ್ರೆಸ್ ಶಾಸಕರು ನಿಜಕ್ಕೂ ವೀರರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಮಹತ್ವದ ಪಾತ್ರ ವಹಿಸಿದರು. ಇಂದು ರಾಜ್ಯದಲ್ಲಿ ಯಶಸ್ವಿ ಆಡಳಿತವನ್ನು ನೀಡಿದ್ದೇವೆ. ಕೋವಿಡ್ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಿದ್ದೇವೆ. ಉಚಿತ ಲಸಿಕೆಗಳನ್ನು ನೀಡಿದ್ದೇವೆ. ಸಿದ್ದರಾಮಯ್ಯನವರು ಹೇಳುತ್ತಾರೆ ನಾವು ಅನ್ನಭಾಗ್ಯ ಕೊಟ್ಟಿದ್ದೇವೆ ಎಂದು. ಆದರೆ ಅನ್ನಭಾಗ್ಯ ಯೊಜನೆಯಲ್ಲಿ ಅವ್ಯವಹಾರಗಳೇ ನಡೆದವು. ಅನ್ನಕ್ಕೂ ಕನ್ನ ಹಾಕಿದರು. ಅನ್ನಭಾಗ್ಯದ ಚೀಲದಲ್ಲಿದ್ದ ಅಕ್ಕಿ ಮೋದಿಯದ್ದು, ಚೀಲ ಮಾತ್ರ ನಿಮ್ಮದು ಸಿದ್ದರಾಮಯ್ಯನವರೇ. ಲಾಪ್ ಟಾಪ್ ಕೊಡುವ ಯೋಜನೆಯಲ್ಲಿಯೂ ಅವ್ಯವಹಾರ ನಡೆಸಿದಿರಿ. ಬಿಜೆಪಿ ಸರ್ಕಾರವನ್ನು ಪರ್ಸಂಟೇಜ್ ಸರ್ಕಾರ ಎನ್ನುತ್ತೀರಿ. ಆದರೆ ನೀವು ಕೆಲಸವನ್ನೇ ಮಾಡದೇ ಬಿಲ್ ಗಳನ್ನು ಮಾತ್ರ ಪಡೆದಿದ್ದೀರಿ. ಸಾಲು ಸಾಲು ಹಗರಣ ನಡೆಸಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಬಡ ಮಕ್ಕಳಿಗಾಗಿ ನಾವು ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇವೆ. ಹಾಲು ಉತ್ಪಾದಕರಿಗಾಗಿಯೇ ಒಂದು ಬ್ಯಾಂಕ್ ಸ್ಥಾಪಿಸಲಿದ್ದೇವೆ. ಸ್ತ್ರೀಶಕ್ತಿ ಸಂಘಗಳ 5 ಲಕ್ಷ ಸದಸ್ಯರಿಗೆ ಉದ್ಯೋಗ ನೀಡುತ್ತಿದ್ದೇವೆ. ಎತ್ತಿನಹೊಳೆ ಯೋಜನೆ ಆರಂಭಿಸಿದ್ದು ನಾವು, ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದ್ದು ನಮ್ಮ ಸರ್ಕಾರ. ಕೋಲಾರ-ಚಿಕ್ಕಬಳ್ಳಾಪುರ ಟೌನ್ ಶಿಪ್ ಗೂ ಚಿಂತನೆ ನಡೆದಿದೆ. ನಮ ಕರ್ನಾಟಕದಿಂದ ನವ ಭಾರತ ನಿರ್ಮಾಣ ನಮ್ಮ ಗುರಿಯಾಗಿದೆ. ಇಲ್ಲಿಂದ ನನ್ನ ಶಕ್ತಿಯನ್ನು ಇಮ್ಮಡಿಗೊಳಿಸಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದು ಘೋಷಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...