alex Certify BIG NEWS: ನನ್ನ ಹೇಳಿಕೆ ಇಷ್ಟೊಂದು ದೊಡ್ಡದಾಗುತ್ತೆ ಎಂದು ಗೊತ್ತಿರಲಿಲ್ಲ; ಕೆಲ ಸ್ನೆಹಿತರ ಮಾತು ನೋವು ತಂದಿದೆ ಎಂದ ಯೋಗೇಶ್ವರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನನ್ನ ಹೇಳಿಕೆ ಇಷ್ಟೊಂದು ದೊಡ್ಡದಾಗುತ್ತೆ ಎಂದು ಗೊತ್ತಿರಲಿಲ್ಲ; ಕೆಲ ಸ್ನೆಹಿತರ ಮಾತು ನೋವು ತಂದಿದೆ ಎಂದ ಯೋಗೇಶ್ವರ್

ರಾಮನಗರ: ನನ್ನ ಕೆಲ ಸ್ನೇಹಿತರು ಮನಸ್ಸಿಗೆ ನೋವಾಗುವಂತೆ ಮಾತನಾಡುತ್ತಿದ್ದಾರೆ. ಅವರ ಹಿಂದೆ ಯಾರು ಮಾತನಾಡಿಸುತ್ತಿದ್ದಾರೋ ಗೊತ್ತಿಲ್ಲ. ಈ ಬೆಳವಣಿಗೆಯಿಂದ ನೋವಾಗಿದೆ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.

ಬಿ.ಜಿ.ಎಸ್. ಶಾಖಾಮಠಕ್ಕೆ ತೆರಳಿ ನಿರ್ಮಲಾನಂದ ಸ್ವಾಮೀಜಿ ಭೇಟಿ ಬಳಿಕ ಮಾತನಾಡಿದ ಯೋಗೇಶ್ವರ್, ನನ್ನ ಹೇಳಿಕೆ ಇಷ್ಟೊಂದು ದೊಡ್ಡದಾಗುತ್ತದೆ ಎಂದು ಗೊತ್ತಿರಲಿಲ್ಲ. ಮಾತನಾಡಲು ಬಹಳ ವಿಷಯಗಳಿವೆ. ಯಾರು ಯಾವಾಗ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬುದನ್ನು ಈಗ ಹೇಳಲ್ಲ. ಕೆಲ ಸ್ನೇಹಿತರ ಮಾತಿಂದ ನೋವಾಗಿದೆ. ನಾನು ಪಕ್ಷದ ಚೌಕಟ್ಟಿನಲ್ಲಿಯೇ ಕೆಲಸ ಮಾಡುತ್ತಿದ್ದೇನೆ ಎಂದರು.

ಯಾರು ಬೇಕಾದರೂ ದೆಹಲಿಗೆ ಹೋಗಬಹುದು, ನನ್ನ ವಿರುದ್ಧ ಸಹಿ ಸಂಗ್ರಹದ ಬಗ್ಗೆಯೂ ನನಗೆ ಗೊತ್ತಿಲ್ಲ. ಮೆಗಾ ಸಿಟಿ ಹಗರಣ ನ್ಯಾಯಾಲಯದಿಂದಲೇ ಕ್ಲಿಯರ್ ಆಗಿದೆ. ಈ ಬಗ್ಗೆ ಬೇಕಿದ್ದರೆ ತನಿಖೆಯಾಗಲಿ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...