alex Certify BIG NEWS: ದಾಖಲೆ ಕೊಡಿ ಎಂದು ಬಿಜೆಪಿಯಿಂದ ಒತ್ತಡ; ನಾನು ತಪ್ಪು ಮಾಡಿದ್ರೆ ಹಗ್ಗವನ್ನೂ ಕಳುಹಿಸಿಕೊಡುತ್ತೇನೆ ಎಂದ ಡಿ.ಕೆ.ಶಿವಕುಮಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದಾಖಲೆ ಕೊಡಿ ಎಂದು ಬಿಜೆಪಿಯಿಂದ ಒತ್ತಡ; ನಾನು ತಪ್ಪು ಮಾಡಿದ್ರೆ ಹಗ್ಗವನ್ನೂ ಕಳುಹಿಸಿಕೊಡುತ್ತೇನೆ ಎಂದ ಡಿ.ಕೆ.ಶಿವಕುಮಾರ್

ಮೈಸೂರು: ನಾನು ಇಂಧನ ಇಲಾಖೆ ಸಚಿವನಾಗಿದ್ದ ಸಂದರ್ಭದ ದಾಖಲೆಗಳನ್ನು ತರುವಂತೆ ಅಧಿಕಾರಿಗಳನ್ನು ಬಿಜೆಪಿ ಸರ್ಕಾರ ಬೆದರಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಈ ಬಗ್ಗೆ ನನಗೆ ಕೆಲ ಅಧಿಕಾರಿಗಳು ಕರೆ ಮಾಡಿ ಹೇಳುತ್ತಿದ್ದಾರೆ. ನನ್ನ ಅವಧಿಯ ದಾಖಲೆಗಳನ್ನು ತರುವಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ. ಅಧಿಕಾರಿಗಳಿಗೆ ನಾನೂ ಎಲ್ಲಾ ದಾಖಲೆಗಳನ್ನು ಕೊಡಿ ಎಂದು ಹೇಳಿದ್ದೇನೆ ಎಂದರು.

ದಾಖಲೆಗಳನ್ನು ಮಾತ್ರವಲ್ಲ ನಾನು ತಪ್ಪು ಮಾಡಿದ್ದರೆ ಹಗ್ಗವನ್ನೂ ಕಳುಹಿಸಿಕೊಡುತ್ತೇನೆ. ಅನಗತ್ಯವಾಗಿ ಬಿಜೆಪಿ ಕಾಂಗ್ರೆಸ್ ನಾಯಕರನ್ನು ಹೆದರಿಸುವ ಕೆಲಸ ಮಾಡುತ್ತಿದೆ. ಅದೇನೇ ತನಿಖೆ ನಡೆಸುತ್ತಾರೋ ನಡೆಸಲಿ ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...