alex Certify BIG NEWS: ತಮ್ಮ ಹೇಳಿಕೆಗೆ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಕ್ಷಮೆ ಯಾಚಿಸಿದ ಶಾಸಕ ಹ್ಯಾರಿಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತಮ್ಮ ಹೇಳಿಕೆಗೆ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಕ್ಷಮೆ ಯಾಚಿಸಿದ ಶಾಸಕ ಹ್ಯಾರಿಸ್

ಬೆಂಗಳೂರು: ಬೆಂಗಳೂರು ಕರಗವನ್ನು ನಾಟಕ ಎಂದು ಕರೆದಿದ್ದ ಕಾಂಗ್ರೆಸ್ ಶಾಸಕ ಹ್ಯಾರಿಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ತಮ್ಮ ಹೇಳಿಕೆಗೆ ಶಾಸಕ ಹ್ಯಾರಿಸ್ ಕ್ಷಮೆಯಾಚಿಸಿದ್ದಾರೆ.

ಬೆಂಗಳೂರಿನ ತಿಗಳರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಶಾಸಕ ಹ್ಯಾರಿಸ್ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬೆಂಗಳೂರು ಕರಗ ನಾಟಕ ಎಂದು ಹ್ಯಾರಿಸ್ ಹೇಳಿದ್ದರು. ಹ್ಯಾರಿಸ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ನೇರವಾಗಿ ದೇಗುಲಕ್ಕೆ ಬಂದು ಕ್ಷಮೆಯಾಚಿಸಿದ್ದಾರೆ.

ಈ ವೇಳೆ ಮಾತನಾಡಿದ ಹ್ಯಾರಿಸ್, ದೇವರ ಮೇಲೆ ನನಗೆ ಅಪಾರ ಭಕ್ತಿ ಗೌರವವಿದೆ. ಧರ್ಮರಾಯಸ್ವಾಮಿ ದೇವಾಲಯದಲ್ಲಿ ನಾನು ಕ್ಷಮೆ ಕೋರಿದ್ದೇನೆ. ಪ್ರತಿವರ್ಷವೂ ಬೆಂಗಳೂರು ಕರಗ ಉತ್ಸವದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...