alex Certify BIG NEWS: ಕೋವಿಡ್ ಕೇರ್ ಸೆಂಟರ್ ನಲ್ಲಿ ಹೋಮ; ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದ ಅಧಿಕಾರಿಗಳು; ತಾಕತ್ತಿದ್ದರೆ ಕೇಸ್ ಹಾಕಿ ಎಂದ ಶಾಸಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೋವಿಡ್ ಕೇರ್ ಸೆಂಟರ್ ನಲ್ಲಿ ಹೋಮ; ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದ ಅಧಿಕಾರಿಗಳು; ತಾಕತ್ತಿದ್ದರೆ ಕೇಸ್ ಹಾಕಿ ಎಂದ ಶಾಸಕ

ದಾವಣಗೆರೆ: ಕೊರೊನಾ ತೊಲಗಿಸಲೆಂದು ಕೋವಿಡ್ ಕೇರ್ ಸೆಂಟರ್ ನಲ್ಲಿ ಹೋಮ-ಹವನ ಮಾಡಿಸಿ ಚರ್ಚೆಗೆ ಗ್ರಾಸವಾಗಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.

ಕೊರೊನಾ ಲಸಿಕೆಯ ಎರಡೂ ಡೋಸ್​ ಪಡೆದ ವೃದ್ಧನ ದೇಹದಲ್ಲಾಯ್ತು ವಿಚಿತ್ರ ಬದಲಾವಣೆ..!

ದಾವಣಗೆರೆಯ ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್ ನಲ್ಲಿ ನಿನ್ನೆ ರೇಣುಕಾಚಾರ್ಯ ಹಾಗು ದಂಪತಿ ಮೃತ್ಯುಂಜಯ ಹೋಮ, ಧ್ವನ್ವಂತರಿ ಹೋಮ ಮಾಡಿಸಿದ್ದರು. ಈ ಕುರಿತ ವಿಡಿಯೋ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ, ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸೋಂಕಿತರು ತಹಶೀಲ್ದಾರ್ ವಿರುದ್ಧವೇ ಪ್ರತಿಭಟನೆ ನಡೆಸಿದ್ದಾರೆ.

ಭಾವಿ ಅಳಿಯನ ಸಂಪಾದನೆ ತಿಳಿದುಕೊಳ್ಳಲು ಅತ್ತೆ – ಮಾವನಿಂದ ಹೈಡ್ರಾಮಾ…!

ಶಾಸಕರ ವಿರುದ್ಧ ಕ್ರಮಕ್ಕೆ ಮುಂದಾದರೆ ನಾವ್ಯಾರೂ ಊಟ-ಉಪಹಾರವನ್ನೂ ಸೇವಿಸಲ್ಲ ಎಂದು ಬೆದರಿಕೆಯೊಡ್ಡಿದ್ದಾರೆ. ಈ ವೇಳೆ ಶಾಸಕ ರೇಣುಕಾಚಾರ್ಯ, ತಾನು ಲೋಕಕಲ್ಯಾಣಕ್ಕೆ, ಜನ ಹಿತಕ್ಕಾಗಿ ಹೋಮ ಮಾಡಿಸಿದ್ದೇನೆ. ನನ್ನ ವಿರುದ್ಧ ಕೇಸ್ ದಾಖಲಿಸಲು ಮುಂದಾಗಿರುವುದರ ಹಿಂದೆ ಕಾಂಗ್ರೆಸ್ ಮಾಜಿ ಶಾಸಕರ ಕೈವಾಡವಿದೆ ತಾಕತ್ತಿದ್ದರೆ ಕೇಸ್ ದಾಖಲಿಸಲಿ ಎಂದು ಸವಾಲು ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...