alex Certify BIG NEWS: ಕೇವಲ 21 ಗುಂಟೆ ಜಾಗಕ್ಕೆ ನಾಲ್ವರು ಸಹೋದರರ ಬರ್ಬರ ಹತ್ಯೆ; 9 ಆರೋಪಿಗಳು ಅರೆಸ್ಟ್; 12 ಜನರಿಂದ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೇವಲ 21 ಗುಂಟೆ ಜಾಗಕ್ಕೆ ನಾಲ್ವರು ಸಹೋದರರ ಬರ್ಬರ ಹತ್ಯೆ; 9 ಆರೋಪಿಗಳು ಅರೆಸ್ಟ್; 12 ಜನರಿಂದ ಕೃತ್ಯ

ಬಾಗಲಕೋಟೆ: ಕೇವಲ 21 ಗುಂಟೆ ಜಾಗಕ್ಕಾಗಿ ಎರಡು ಕುಟುಂಬಗಳ ನಡುವೆ ನಡೆದಿದ್ದ ಜಗಳ ನಾಲ್ವರು ಸಹೋದರರ ಕೊಲೆಯಲ್ಲಿ ಅಂತ್ಯವಾಗಿದ್ದು, ಪ್ರಕರಣ ಸಂಬಂಧ 9 ಆರೋಪಿಗಳನ್ನು ಬಾಗಲಕೋಟೆ ಜಮಖಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೃತ್ಯದಲ್ಲಿ 12 ಜನರ ಹೆಸರು ಕೇಳಿಬಂದಿದೆ. ಪುಟಾಣಿ ಮನೆತನದ ನಂದೀಶ್, ನಾಗಪ್ಪ, ಪರಪ್ಪ, ಶಿವಾನಂದ, ಈರಪ್ಪ, ಶಂಕರ್, ಅಂಬವ್ವ, ರುಕ್ಮವ್ವ, ಮಾಲಾಶ್ರೀ, ಸುನಂದಾ ಹಾಗೂ ಪ್ರೇಮಾ ನಿಡೋಣಿ, ಚನ್ನಬಸಪ್ಪ ನಿಡೋಣಿ ಸೇರಿದಂತೆ 12 ಮಂದಿ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಕುತೂಹಲಕ್ಕೆ ಕಾರಣವಾಗಿದ್ದಾನೆ ’ದಿ ರಾಕ್‌ʼ ತದ್ರೂಪಿ

ಮುದರಡ್ಡಿ ಹಾಗೂ ಪುಟಾಣಿ ಕುಟುಂಬಗಳ ನಡುವೆ 21 ಗುಂಟೆ ಜಾಗಕ್ಕಾಗಿ ತಕರಾರು ನಡೆದು ನಿನ್ನೆ ಪುಟಾಣಿ ಕುಟುಂಬ ಸದಸ್ಯರು ಮುದರಡ್ಡಿ ಕುಟುಂಬದ ಓರ್ವ ಸಹೋದರನ ಮೇಲೆ ಜಮೀನಿನಲ್ಲಿ ಮಾರಕಾಸ್ತ್ರಗಳಲ್ಲಿ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ವಿಷಯ ತಿಳಿದು ಇನ್ನುಳಿದ ಮೂವರು ಸಹೋದರರು ಸ್ಥಳಕ್ಕೆ ಬರುತ್ತಿದ್ದಂತೆ ಪುಟಾಣಿ ಕುಟುಂಬದವರು, ಒಬ್ಬೊಬ್ಬ ಸಹೋದರರನ್ನೂ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ.

ಮೃತ ಸಹೋದರರನ್ನು ಮಲ್ಲಪ್ಪ, ಬಸಪ್ಪ, ಈಶ್ವರ ಹಾಗೂ ಹನಮಂತ ಎಂದು ಗುರುತಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...