alex Certify BIG NEWS: ಕೆ.ಸಿ. ವ್ಯಾಲಿ ಯೋಜನೆ ಹೆಸರಲ್ಲಿ ಜೇಬು ತುಂಬಿಸಿಕೊಂಡಿದ್ದಾರೆ; ರಮೇಶ್ ಕುಮಾರ್ ವಿರುದ್ಧ HDK ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೆ.ಸಿ. ವ್ಯಾಲಿ ಯೋಜನೆ ಹೆಸರಲ್ಲಿ ಜೇಬು ತುಂಬಿಸಿಕೊಂಡಿದ್ದಾರೆ; ರಮೇಶ್ ಕುಮಾರ್ ವಿರುದ್ಧ HDK ಆರೋಪ

ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕೆಸಿ ವ್ಯಾಲಿ ಯೋಜನೆ ಹೆಸರಲ್ಲಿ ಜೇಬು ತುಂಬಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕೋಲಾರ ಜಿಲ್ಲೆ ಶಿನಿಗೇನಹಳ್ಳಿಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, ಕೆ.ಸಿ. ವ್ಯಾಲಿ ಹೆಸರಲ್ಲಿ ರಮೇಶ್ ಕುಮಾರ್ ಜೇಬು ತುಂಬಿಸಿಕೊಂಡಿದ್ದು, ಆ ಹಣದಲ್ಲಿಯೇ ಅವರು ಚುನಾವಣೆಗೆ ಹೋಗುತ್ತಾರೆ ಎಂದರು.

ನಮ್ಮ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಶುದ್ಧೀಕರಿಸಿದ ಕುಡಿಯುವ ನೀರು ಕೊಡುತ್ತೇವೆ. ಮೂರನೇ ಹಂತದಲ್ಲಿ ನೀರು ಶುದ್ಧೀಕರಣ ಮಾಡಿ ಶುದ್ಧಕುಡಿಯುವ ನೀರು ಪೂರೈಸುವುದಾಗಿ ಶಪಥ ಮಾಡಿದ್ದೇನೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...