alex Certify BIG NEWS: ಕೆನಡಾದಲ್ಲಿ ಉಗ್ರ ರೂಪ ತಾಳಿದ ಪ್ರತಿಭಟನೆ, ಅಜ್ಞಾತ ಸ್ಥಳಕ್ಕೆ ಪ್ರಧಾನಿ ಕುಟುಂಬ ಸ್ಥಳಾಂತರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೆನಡಾದಲ್ಲಿ ಉಗ್ರ ರೂಪ ತಾಳಿದ ಪ್ರತಿಭಟನೆ, ಅಜ್ಞಾತ ಸ್ಥಳಕ್ಕೆ ಪ್ರಧಾನಿ ಕುಟುಂಬ ಸ್ಥಳಾಂತರ…!

ಕೆನಡಾದ ಒಂಟಾರಿಯೊದ ಪಾರ್ಲಿಮೆಂಟ್ ಹಿಲ್‌ನಲ್ಲಿ ಸಾವಿರಾರು ಪ್ರತಿಭಟನಾಕಾರರು ಕೋವಿಡ್ ಲಸಿಕೆ ಆದೇಶಗಳು ಮತ್ತು ಇತರ ಸಾರ್ವಜನಿಕ ಆರೋಗ್ಯ ನಿರ್ಬಂಧಗಳನ್ನು ಕೊನೆಗೊಳಿಸಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ‌.‌ ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ, ಭದ್ರತೆ ಕಾರಣದಿಂದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಅವರ ಕುಟುಂಬವನ್ನು ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಿಬಿಸಿ ನ್ಯೂಸ್‌ ವರದಿ ಮಾಡಿದೆ.

ಶನಿವಾರ, ದೇಶದ ಬಹುತೇಕ ಎಲ್ಲಾ ಪ್ರದೇಶಗಳಿಂದ ಕಾಲ್ನಡಿಗೆಯಲ್ಲೆ ಬಂದಿರುವ ಪ್ರತಿಭಟನಾಕಾರರು ಪಾರ್ಲಿಮೆಂಟ್ ಹಿಲ್‌ನಲ್ಲಿ ಸೇರಿಕೊಂಡರು. ಪ್ರತಿಭಟನೆ ನಡೆಸುತ್ತಿರುವವರಲ್ಲಿ ಹೆಚ್ಚಾಗಿ ಟ್ರಕ್ ಚಾಲಕರಿದ್ದಾರೆ ಎಂದು ಹೇಳಲಾಗ್ತಿದೆ. ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಏರಿರುವ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಖಂಡಿಸಿ ಅವರೆಲ್ಲರೂ ಶನಿವಾರ ಸಂಸತ್ತಿನ ಆವರಣದಲ್ಲಿ ಒಗ್ಗೂಡಿ.‌ ಪ್ರಧಾನಮಂತ್ರಿ ವಿರುದ್ಧ ಘೋಷಣೆ ಕೂಗಿದರು. ಕೋವಿಡ್ ನಿಯಮಗಳನ್ನು ಹಿಂಪಡೆಯಿರಿ ಎಂಬ ಭಿತ್ತಿ ಪತ್ರಗಳನ್ನು ಸಂಸತ್ ಕಟ್ಟಡದ ಮೇಲೆ ಅಂಟಿಸಿ, ನಮಗೆ ಸ್ವಾತಂತ್ರ್ಯ ಬೇಕು ಎಂದು ಬರೆದಿದ್ದ ಬಾವುಟಗಳನ್ನ ಹಿಡಿದು ಪ್ರತಿಭಟನೆ ನಡೆಸಿದ್ರು ಎಂದು ಸಿಬಿಸಿ ನ್ಯೂಸ್ ವರದಿ ಮಾಡಿದೆ.

ಪಿಎಂ ಜಸ್ಟಿನ್ ಟ್ರುಡೊ, ಕುಟುಂಬವನ್ನು ಭದ್ರತಾ ಕಾರಣಗಳಿಗಾಗಿ ಸ್ಥಳಾಂತರಿಸಲಾಗಿದೆ.‌ ಜನಸಂದಣಿಯನ್ನು ಶಾಂತಿಯುತವಾಗಿರುವಂತೆ ಸಂಘಟಕರು ಒತ್ತಾಯಿಸುತ್ತಿದ್ದಾರೆ. ಆದರೆ ಹಿಂಸಾಚಾರ ಸಂಭವಿಸಬಹುದು ಎಂದು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಈ ಹಿಂದೆ, ಪ್ರತಿಭಟನೆ ನಡೆಯುತ್ತಿರುವ ಸ್ಥಳದಿಂದ ಸರಿಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿರುವ ರೈಡೋ ಕಾಟೇಜ್‌ನಲ್ಲಿ ಪಿಎಂ ಕುಟುಂಬ ವಾಸಿಸುತ್ತಿತ್ತು. ಆದರೆ ಇನ್ಮುಂದೆ ಅವರ ಕುಟುಂಬವು ಅಲ್ಲಿ ವಾಸಿಸುವುದಿಲ್ಲ ಎಂದು ವರದಿಯಾಗಿದೆ. ಪ್ರಧಾನಿ ಟ್ರುಡೋ “ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ” ಇರಬಹುದೆಂದು ಹೇಳಲಾಗ್ತಿದೆ. ಪ್ರಧಾನಿ ಟ್ರುಡೋ ಅವರ ಮಕ್ಕಳೊಬ್ಬರಲ್ಲಿ ಕೋವಿಡ್ ಪತ್ತೆಯಾಗಿದೆ, ಹೀಗಾಗಿ ಎಲ್ಲರು ಐಸೋಲೇಟ್ ಆಗಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.‌ ಆದರೆ ಪ್ರಧಾನಿ ಎಲ್ಲಿದ್ದಾರೆ ಎಂಬುದು ಇನ್ನು ನಿಖರವಾಗಿ ತಿಳಿದಿಲ್ಲ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...