alex Certify BIG NEWS: ಕಾಂಗ್ರೆಸ್ ಚೇಲಾಗಳಿಂದಲೇ ಇಂತಹ ಕೃತ್ಯ; ಸಚಿವ ಶ್ರೀರಾಮುಲು ಗಂಭೀರ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಾಂಗ್ರೆಸ್ ಚೇಲಾಗಳಿಂದಲೇ ಇಂತಹ ಕೃತ್ಯ; ಸಚಿವ ಶ್ರೀರಾಮುಲು ಗಂಭೀರ ಆರೋಪ

ಬೆಂಗಳೂರು: ಎಂಇಎಸ್ ನಿಷೇಧಕ್ಕೆ ನಮ್ಮದು ಸಂಪೂರ್ಣ ಸಹಮತವಿದೆ. ಪುಂಡಾಟ ಮೆರೆಯುವ ಯಾರೇ ಆಗಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಎಂಇಎಸ್ ಪುಂಡಾಟ, ರಾಯಣ್ಣ ಪ್ರತಿಮೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಇದನ್ನು ಯಾರು ಮಾಡಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಕಾಂಗ್ರೆಸ್ ಚೇಲಾಗಳು ಈ ರೀತಿ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಕೃತ್ಯ ನಡೆಸಿದ್ದು ಕೂಡ ಕಾಂಗ್ರೆಸ್ಸಿಗರು ಎಂದು ಆರೋಪಿಸಿದರು.

ಪುಷ್ಪಾ ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್‌ರನ್ನು ಹಾಡಿ ಹೊಗಳಿದ ಸಮಂತಾ

ಎಂಇಎಸ್ ಮೊದಲಿನಿಂದಲೂ ಪುಂಡಾಟ ನಡೆಸುತ್ತಾ ಬಂದಿದೆ. ಅವರಿಗೆ ಕುಮ್ಮಕ್ಕು ಕೊಡುವವರನ್ನೂ ಬಂಧಿಸುತ್ತೇವೆ. ಎಂಇಎಸ್ ಕೆಲಸಕ್ಕೆ ಮಹಾರಾಷ್ಟ್ರ ಸಿಎಂ ಪ್ರಚೋದಿಸುತ್ತಿದ್ದಾರೆ. ಇಂತಹ ಘಟನೆಗಳು ನಿಲ್ಲಬೇಕು ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...