alex Certify BIG NEWS: ಕರ್ನಾಟಕದ ಸಿನಿ ಶೆಟ್ಟಿ ಮುಡಿಗೆ ʼಫೆಮಿನಾ ಮಿಸ್‌ ಇಂಡಿಯಾ ವರ್ಲ್ಡ್‌ʼ ಕಿರೀಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕರ್ನಾಟಕದ ಸಿನಿ ಶೆಟ್ಟಿ ಮುಡಿಗೆ ʼಫೆಮಿನಾ ಮಿಸ್‌ ಇಂಡಿಯಾ ವರ್ಲ್ಡ್‌ʼ ಕಿರೀಟ

ಕರ್ನಾಟಕದ ಸಿನಿ ಶೆಟ್ಟಿ ಫೆಮಿನಾ ಮಿಸ್‌ ಇಂಡಿಯಾ ವರ್ಲ್ಡ್‌ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಮುಂಬೈನಲ್ಲಿ ಭಾನುವಾರದಂದು ನಡೆದ ವರ್ಣರಂಜಿತ ಸಮಾರಂಭದಲ್ಲಿ ಈ ಆಯ್ಕೆಯನ್ನು ಘೋಷಿಸಲಾಯಿತು.

ಮುಂಬೈನ ಜಿಯೋ ವರ್ಲ್ಡ್‌ ಕನ್ವೆನ್ಶನ್‌ ಸೆಂಟರ್‌ ನಲ್ಲಿ ಆಯೋಜಿಸಲಾಗಿದ್ದ ಈ ಅದ್ದೂರಿ ಸಮಾರಂಭದಲ್ಲಿ ಈ ಆಯ್ಕೆಯನ್ನು ಘೋಷಿಸಲಾಗಿದ್ದು, ರಾಜಸ್ಥಾನದ ರೂಬಲ್‌ ಶೆಖಾವತ್‌ ಮೊದಲ ರನ್ನರ್‌ ಅಪ್‌ ಹಾಗೂ ಉತ್ತರ ಪ್ರದೇಶದ ಶಿನಾತ ಚವಾಣ್‌ ದ್ವಿತೀಯ ರನ್ನರ್‌ ಅಪ್‌ ಆಗಿ ಹೊರ ಹೊಮ್ಮಿದ್ದಾರೆ.

ಸ್ಪರ್ಧೆಯ ಜ್ಯೂರಿಗಳಾಗಿ ಮಾಜಿ ಫೆಮಿನಾ ಮಿಸ್‌ ಇಂಡಿಯಾ ಯುನಿವರ್ಸ್‌ ವಿಜೇತೆ ನೇಹಾ ದೂಪಿಯಾ, ನಟ ಡಿನೂ ಮಾರಿಯಾ, ನಟಿ ಮಲೈಕಾ ಆರೋರಾ, ಡಿಸೈನರ್‌ ಗಳಾದ ರೋಹಿತ್‌ ಗಾಂಧಿ ಮತ್ತು ರಾಹುಲ್‌ ಖನ್ನಾ, ಕೋರಿಯೋಗ್ರಾಫರ್‌ ಶೈಮಕ್‌ ದಾವರ್‌ ಹಾಗೂ ಮಾಜಿ ಕ್ರಿಕೆಟರ್‌ ಮಿಥಾಲಿ ರಾಜ್‌ ಭಾಗವಹಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...