alex Certify BIG NEWS: ಐಸಿಸ್ ಗೆ ಮುಸ್ಲಿಂ ಯುವಕರನ್ನು ನೇಮಿಸಿಕೊಳ್ಳುತ್ತಿದ್ದ PFI ಪದಾಧಿಕಾರಿಗಳು; NIA ನಿಂದ ಸ್ಪೋಟಕ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಐಸಿಸ್ ಗೆ ಮುಸ್ಲಿಂ ಯುವಕರನ್ನು ನೇಮಿಸಿಕೊಳ್ಳುತ್ತಿದ್ದ PFI ಪದಾಧಿಕಾರಿಗಳು; NIA ನಿಂದ ಸ್ಪೋಟಕ ಮಾಹಿತಿ ಬಹಿರಂಗ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪದಾಧಿಕಾರಿಗಳು, ಸದಸ್ಯರು ಮತ್ತು ಕಾರ್ಯಕರ್ತರು, ಮೂಲಭೂತವಾದವನ್ನು ಪ್ರೋತ್ಸಾಹಿಸಲು ಹಾಗೂ ಮುಸ್ಲಿಂ ಯುವಕರನ್ನು ಐಸಿಸ್‌ನಂತಹ ನಿಷೇಧಿತ ಸಂಘಟನೆಗಳಿಗೆ ಸೇರ್ಪಡೆ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸಿದೆ.

ಬಂಧಿತರನ್ನು ಕಸ್ಟಡಿಗೆ ಕೋರಿದ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. PFI ನಾಯಕರು ಮತ್ತು ಕಾರ್ಯಕರ್ತರು ಕೇರಳ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಭಾರತ ಮತ್ತು ವಿದೇಶಗಳಿಂದ ಪಿತೂರಿ ನಡೆಸುತ್ತಿದ್ದಾರೆ ಮತ್ತು ಇದಕ್ಕಾಗಿ ಹಣವನ್ನು ಸಂಗ್ರಹಿಸುತ್ತಿದ್ದಾರೆ ಎಂದು ಭಯೋತ್ಪಾದನಾ ನಿಗ್ರಹ ಸಂಸ್ಥೆ ಆರೋಪಿಸಿದೆ.

ಪಿತೂರಿಯ ಅನುಸಾರವಾಗಿ, ಆರೋಪಿಗಳು ಸಾಮಾನ್ಯ ಜನರ ಮನಸ್ಸಿನಲ್ಲಿ ಭಯಭೀತಿ ಮೂಡಿಸುವ ಉದ್ದೇಶದಿಂದ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಭಯೋತ್ಪಾದಕ ಕೃತ್ಯವೆಸಗಲು ಪೂರ್ವಸಿದ್ಧತಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಎನ್ಐಎ ಲಿಖಿತವಾಗಿ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ. ಗೃಹ ಸಚಿವಾಲಯದ (MHA) ನಿರ್ದೇಶನದಂತೆ ಈ ವರ್ಷದ ಏಪ್ರಿಲ್ 13 ರಂದು ಮೊದಲ ಮಾಹಿತಿ ವರದಿಯನ್ನು ನೋಂದಾಯಿಸಲಾಗಿದೆ.

ಭಾರತೀಯ ದಂಡ ಸಂಹಿತೆ, 1860 ರ ಸೆಕ್ಷನ್ 120 ಮತ್ತು 153 ಎ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 ರ ಸೆಕ್ಷನ್ 17, 18, 18 ಬಿ, 20, 22 ಬಿ, 38 ಮತ್ತು 39 ರ ಅಡಿಯಲ್ಲಿ ಪಿಎಫ್‌ಐ ನಾಯಕರ ವಿರುದ್ಧ ಎನ್‌ಐಎ ಪ್ರಕರಣ ದಾಖಲಿಸಿದೆ.

ಎನ್‌ಐಎ ಆರೋಪಿಗಳ ರಿಮಾಂಡ್ ಪ್ರತಿಯಲ್ಲಿ “ಪಿತೂರಿಯ ಅನುಸಾರವಾಗಿ, ಪಿಎಫ್‌ಐ ನಾಯಕರು, ಪದಾಧಿಕಾರಿಗಳು ಮುಸ್ಲಿಂ ಯುವಕರನ್ನು ಐಸಿಸ್‌ನಂತಹ ನಿಷೇಧಿತ ಸಂಘಟನೆಗಳಿಗೆ ಸೇರ್ಪಡೆಗೊಳಿಸುವಲ್ಲಿ ಹೇಗೆ ತೊಡಗಿಸಿಕೊಂಡಿದ್ದರು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ.

ಕಾಲೇಜು ಪ್ರಾಧ್ಯಾಪಕರ ಕೈ ಕತ್ತರಿಸುವುದು, ಇತರ ಧರ್ಮಗಳನ್ನು ಪ್ರತಿಪಾದಿಸುವ ಸಂಸ್ಥೆಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಕೊಲೆ, ಪ್ರಮುಖ ವ್ಯಕ್ತಿಗಳು ಮತ್ತು ಸ್ಥಳಗಳನ್ನು ಗುರಿಯಾಗಿಸಿ ಸ್ಫೋಟ ಮೊದಲಾದ ಕೃತ್ಯಗಳನ್ನು PFI ನಡೆಸಿದೆ ಎಂದು ಎನ್ಐಎ ಹೇಳಿದೆ.

ಎಫ್‌ಐಆರ್‌ನಲ್ಲಿ ಹೆಸರಿಸಲಾದ ಪಿಎಫ್‌ಐ ಕಾರ್ಯಕರ್ತರಲ್ಲಿ ಒಬ್ಬರಾದ ಯಾಸಿರ್ ಅರಾಫತ್ ಅಲಿಯಾಸ್ ಯಾಸಿರ್ ಹಸನ್ ಮತ್ತು ಇತರರು ತಮ್ಮ ಸದಸ್ಯರಿಗೆ ಮತ್ತು ಇತರರಿಗೆ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ತರಬೇತಿ ನೀಡುವಲ್ಲಿ ತೊಡಗಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ.

ಆರೋಪಿತರು ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಅದಕ್ಕಾಗಿ ಸಾಮಾಜಿಕ ಮಾಧ್ಯಮ ಮತ್ತು ಇತರ ವೇದಿಕೆಗಳ ಮೂಲಕ ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಕದಡುತ್ತಿದ್ದಾರೆ ಎಂದು ಎನ್ಐಎ ಹೇಳಿದೆ.

ಎನ್‌ಐಎ, ಇಡಿ ಮತ್ತು ರಾಜ್ಯ ಪೊಲೀಸ್ ಪಡೆಗಳು ಭಾರತದಾದ್ಯಂತ ನಡೆಸಿದ ಶೋಧಗಳಲ್ಲಿ ಗುರುವಾರ 106 ಪಿಎಫ್‌ಐ ನಾಯಕರು, ಕಾರ್ಯಕರ್ತರು ಮತ್ತು ಇತರರನ್ನು ಬಂಧಿಸಿದ್ದಾರೆ. ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಅಸ್ಸಾಂ, ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಮಣಿಪುರದ 15 ರಾಜ್ಯಗಳ 93 ಸ್ಥಳಗಳಲ್ಲಿ ಎನ್‌ಐಎ ಶೋಧ ನಡೆಸಿದೆ.

PFI ನಾಯಕರು ಮತ್ತು ಕಾರ್ಯಕರ್ತರು ಭಯೋತ್ಪಾದನೆ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ ಮತ್ತು ತರಬೇತಿ ಶಿಬಿರಗಳನ್ನು ಆಯೋಜಿಸುವಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದಕ್ಕೆ ಮುಂದುವರಿದ ಒಳಹರಿವು ಮತ್ತು ಪುರಾವೆಗಳ ನಂತರ NIA ದಾಖಲಿಸಿದ ಐದು ಪ್ರಕರಣಗಳಿಗೆ ಸಂಬಂಧಿಸಿದಂತೆ PFI ಉನ್ನತ ನಾಯಕರು ಮತ್ತು ಸದಸ್ಯರ ಮನೆ ಮತ್ತು ಕಚೇರಿಗಳಲ್ಲಿ ಈ ಶೋಧಗಳನ್ನು ನಡೆಸಲಾಯಿತು.

ಆರಂಭದಲ್ಲಿ, ಎನ್‌ಐಎ ಜುಲೈ 4 ರಂದು ತೆಲಂಗಾಣದ ನಿಜಾಮಾಬಾದ್ ಪೊಲೀಸ್ ಠಾಣೆಯಲ್ಲಿ 25 ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ಆಧರಿಸಿ ಪ್ರಕರಣ ದಾಖಲಿಸಿದೆ, ಆರೋಪಿಗಳು ಹಿಂಸಾತ್ಮಕ ಮತ್ತು ಭಯೋತ್ಪಾದಕ ಕೃತ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ತರಬೇತಿ ನೀಡಲು ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ ಎಂದು ತೆಲಂಗಾಣ ಪೊಲೀಸರು ಕಂಡುಕೊಂಡ ನಂತರ ಪ್ರಕರಣ ದಾಖಲಾಗಿದೆ.

ಹಲವು ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಪಿಎಫ್‌ಐ ಮತ್ತು ಅದರ ನಾಯಕರು ಮತ್ತು ಸದಸ್ಯರ ವಿರುದ್ಧ ಕಳೆದ ಕೆಲವು ವರ್ಷಗಳಿಂದ ವಿವಿಧ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಎನ್‌ಐಎ ಹೇಳಿದೆ.

ಈ ಪ್ರಕರಣಗಳಲ್ಲಿ ಎನ್‌ಐಎ ಒಟ್ಟು 45 ಮಂದಿಯನ್ನು ಬಂಧಿಸಿದೆ. ಕೇರಳದಿಂದ 19 ಆರೋಪಿಗಳನ್ನು ಬಂಧಿಸಿದ್ದರೆ, ತಮಿಳುನಾಡಿನಿಂದ 11, ಕರ್ನಾಟಕದಿಂದ 7, ಆಂಧ್ರಪ್ರದೇಶದಿಂದ ನಾಲ್ವರು, ರಾಜಸ್ಥಾನದಿಂದ ಇಬ್ಬರು ಮತ್ತು ಉತ್ತರ ಪ್ರದೇಶ ಮತ್ತು ತೆಲಂಗಾಣದಿಂದ ತಲಾ ಒಬ್ಬರನ್ನು ಬಂಧಿಸಲಾಗಿದೆ.

ಎನ್‌ಐಎ ಇತ್ತೀಚೆಗೆ ದಾಖಲಾದ ಐದು ಸೇರಿದಂತೆ ಇಲ್ಲಿಯವರೆಗೆ ಒಟ್ಟು 19 ಪಿಎಫ್‌ಐ ಸಂಬಂಧಿತ ಪ್ರಕರಣಗಳನ್ನು ತನಿಖೆ ನಡೆಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...