alex Certify BIG NEWS: ಈ ವಾರದಲ್ಲೇ ಬಿಡುಗಡೆಯಾಲಿದೆ 2021-22ನೇ ಸಾಲಿನ CTET ಪರೀಕ್ಷೆ ಫಲಿತಾಂಶ…!? ರಿಸಲ್ಟ್ ಪರಿಶೀಲಿಸುವುದು ಹೇಗೆ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಈ ವಾರದಲ್ಲೇ ಬಿಡುಗಡೆಯಾಲಿದೆ 2021-22ನೇ ಸಾಲಿನ CTET ಪರೀಕ್ಷೆ ಫಲಿತಾಂಶ…!? ರಿಸಲ್ಟ್ ಪರಿಶೀಲಿಸುವುದು ಹೇಗೆ….?

ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ(CTET)ಯ ಫಲಿತಾಂಶವನ್ನು ಸಿಬಿಎಸ್ಇ, ಈ ವಾರ ಘೋಷಿಸುವ ಸಾಧ್ಯತೆಯಿದೆ. ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ,‌ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ,‌ CTET ಡಿಸೆಂಬರ್ 2021 ರ ವೇಳಾಪಟ್ಟಿಯ ಪ್ರಕಾರ, ಫಲಿತಾಂಶಗಳನ್ನು ಫೆಬ್ರವರಿ 15 ರಂದು ಪ್ರಕಟಿಸಬೇಕಾಗಿತ್ತು. ಆದರೆ ಮಂಡಳಿಯು ಈವರೆಗು ಫಲಿತಾಂಶವನ್ನು ಬಿಡುಗಡೆ ಮಾಡಿಲ್ಲ.

CTET ಪರೀಕ್ಷೆಯು ಡಿಸೆಂಬರ್ 16, 2021 ಮತ್ತು ಜನವರಿ 21, 2022 ರ ನಡುವೆ ನಡೆಯಿತು. ಕಂಪ್ಯೂಟರ್ ಆಧಾರಿತ ಅಥವಾ CBT ಮೋಡ್‌ನಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಯನ್ನು ಭಾರತದ ವಿವಿಧ ನಗರಗಳಲ್ಲಿ 20 ಭಾಷೆಗಳಲ್ಲಿ ನಡೆಸಲಾಗಿದೆ ಎಂಬುದು ಗಮನಾರ್ಹ.

ಮೊದಲೇ ಹೇಳಿದಂತೆ ಪರೀಕ್ಷೆಯ ರಿಸಲ್ಟ್ಸ್ ಫೆಬ್ರವರಿ 15ರಂದು ಪ್ರಕಟವಾಗಬೇಕಿತ್ತು. ಆದರೆ ಈವರೆಗೂ ಮಂಡಳಿ ಫಲಿತಾಂಶದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲಾ. ಆದರೆ ಇದೇ ವಾರದಲ್ಲಿ ಪರೀಕ್ಷಾ ಫಲಿತಾಂಶ ಹೊರ ಬೀಳಲಿದೆ ಎಂದು ಜೀ‌ನ್ಯೂಸ್ ವರದಿ ಮಾಡಿದೆ. ಹೀಗಾಗಿ ಫಲಿತಾಂಶ ಘೋಷಣೆಯಾದ್ಮೇಲೆ, ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಹೇಗೆ ಪರಿಶೀಲಿಸಬಹುದು ಎಂಬ ಮಾಹಿತಿಯನ್ನು ನೀಡಲಾಗಿದೆ.

1. ಫಲಿತಾಂಶವನ್ನು ಘೋಷಿಸಿದ ನಂತರ, CTET ಡಿಸೆಂಬರ್ 2021ರ ಅಭ್ಯರ್ಥಿಗಳು ಸಿಟಿಇಟಿಯ ಅಧಿಕೃತ ವೆಬ್‌ಸೈಟ್(https://ctet.nic.in)ಗೆ ಭೇಟಿ ನೀಡಬೇಕು.

2. ನಂತರ ಮುಖಪುಟ ಕಾಣಿಸುತ್ತದೆ. ಇಲ್ಲಿ ಅಭ್ಯರ್ಥಿಗಳು CTET ಡಿಸೆಂಬರ್ 2021 ಫಲಿತಾಂಶ (CTET December 2021 result) ಲಿಂಕ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

3. ಈಗ ಹೊಸ ಪುಟವೊಂದು ತೆರೆದುಕೊಳ್ಳುತ್ತದೆ. ಇಲ್ಲಿ ಅಭ್ಯರ್ಥಿಗಳು ತಮ್ಮ ರೋಲ್ ನಂಬರ್ ಅನ್ನು ನಮೂದಿಸಬೇಕು.

4. ಅಭ್ಯರ್ಥಿಗಳು ರೋಲ್ ಸಂಖ್ಯೆಯನ್ನು ನಮೂದಿಸಿದ ನಂತರ ಫಲಿತಾಂಶಗಳು ಪರದೆಯ ಮೇಲೆ ಕಾಣಿಸುತ್ತದೆ. ಫಲಿತಾಂಶದ ಪ್ರತಿಯನ್ನು ಡೌನ್ಲೋಡ್ ಸಹ ಮಾಡಿಕೊಳ್ಳುವ ಆಯ್ಕೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...