alex Certify BIG NEWS: ಇಂದಿನಿಂದ ಓಲಾ – ಉಬರ್ ಆಟೋ ಸೇವೆ ಸ್ಥಗಿತ; ನಿಯಮ ಉಲ್ಲಂಘಿಸಿದರೆ 5 ಸಾವಿರ ರೂ. ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇಂದಿನಿಂದ ಓಲಾ – ಉಬರ್ ಆಟೋ ಸೇವೆ ಸ್ಥಗಿತ; ನಿಯಮ ಉಲ್ಲಂಘಿಸಿದರೆ 5 ಸಾವಿರ ರೂ. ದಂಡ

ಆಟೋ ಸೇವೆ ನೀಡುವ ನೆಪದಲ್ಲಿ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿವೆ ಎಂಬ ಆರೋಪಾಗುತ್ತಿದ್ದ ಓಲಾ ಹಾಗೂ ಉಬರ್ ಕಂಪನಿಗೆ ಸಾರಿಗೆ ಇಲಾಖೆ ಬಿಗ್ ಶಾಕ್ ನೀಡಿದೆ. ಇಂದಿನಿಂದ ಆಟೋ ಸೇವೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ ಭಾರಿ ದಂಡ ವಿಧಿಸುವುದಾಗಿ ಎಚ್ಚರಿಸಲಾಗಿದೆ.

ಸಾರಿಗೆ ಇಲಾಖೆ ಆಯುಕ್ತರು ಈ ಕುರಿತಂತೆ ಸೂಚನೆ ಹೊರಡಿಸಿದ್ದು, ಮಹತ್ವದ ಸಂಗತಿ ಎಂದರೆ ಅಗ್ರಿಗೇಟರ್ ಲೈಸೆನ್ಸ್ ಪ್ರಕಾರ ಈ ಎರಡೂ ಕಂಪನಿಗಳು ತ್ರಿಚಕ್ರ ವಾಹನ ಓಡಿಸುವ ಪರವಾನಿಗೆ ಹೊಂದಿರಲಿಲ್ಲವೆಂದು ಹೇಳಲಾಗಿದೆ. ಹೀಗಿದ್ದರೂ ಸಹ ಆಟೋ ಸೇವೆ ಆರಂಭಿಸುವ ಮೂಲಕ ಸಾರ್ವಜನಿಕರಿಂದ ಓಲಾ – ಉಬರ್ ಕಂಪನಿಗಳು ಹಣ ಸುಲಿಗೆ ಮಾಡಿದ್ದವು.

ಪ್ರಯಾಣಿಕರಿಂದ ಬೇಕಾಬಿಟ್ಟಿ ಹಣ ವಸೂಲು ಮಾಡುತ್ತಿದ್ದ ಈ ಕಂಪನಿಗಳು ಆಟೋ ಚಾಲಕರುಗಳಿಗೆ ಅತಿ ಕಡಿಮೆ ಪಾವತಿ ಮಾಡುತ್ತಿದ್ದರು ಎನ್ನಲಾಗಿದೆ. ಈ ಕುರಿತಂತೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದ್ದು, ಇಂದಿನಿಂದ ಓಲಾ – ಉಬರ್ ಆಟೋ ಸೇವೆ ಸ್ಥಗಿತಗೊಳಿಸಲು ಸೂಚನೆ ನೀಡಲಾಗಿದೆ. ಇದನ್ನು ಉಲ್ಲಂಘಿಸಿ ಈ ಆಟೋಗಳು ರಸ್ತೆಗಿಳಿದರೆ ಪ್ರತಿ ಆಟೋಗೆ ರೂ.5,000 ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...