alex Certify BIG NEWS: ಆಡಿಯೋ-ವಿಡಿಯೋ ಬಾಂಬ್ ವಿಚಾರ; ಅಶ್ಲೀಲ ದೃಶ್ಯ ಸೇರಿಸಿ ದುರ್ಬಳಕೆಗೆ ಪ್ಲಾನ್; ಹೆಚ್.ಡಿ.ಕೆ. ವಿರುದ್ಧ ರಾಕ್ ಲೈನ್ ಸ್ಪೋಟಕ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆಡಿಯೋ-ವಿಡಿಯೋ ಬಾಂಬ್ ವಿಚಾರ; ಅಶ್ಲೀಲ ದೃಶ್ಯ ಸೇರಿಸಿ ದುರ್ಬಳಕೆಗೆ ಪ್ಲಾನ್; ಹೆಚ್.ಡಿ.ಕೆ. ವಿರುದ್ಧ ರಾಕ್ ಲೈನ್ ಸ್ಪೋಟಕ ಆರೋಪ

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕೆಂಡಕಾರಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಅವರು ಆಡಿಯೋ-ವಿಡಿಯೋ ಎಂದು ಹೇಳಿ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿನ ಸಿಸಿ ಟಿವಿ ದ್ಯಶ್ಯಾವಳಿಗಳನ್ನು ದುರ್ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾಕ್ ಲೈನ್ ವೆಂಕಟೇಶ್, ಚುನಾವಣೆ ಸಂದರ್ಭದಲ್ಲಿ ನಾನು ಹಾಗೂ ಹಲವರು, ಸುಮಲತಾ ಎಲ್ಲರೂ ಮಂಡ್ಯದಲ್ಲಿ ಹೋಟೆಲ್ ನಲ್ಲಿ ಇರುತ್ತಿದ್ದೆವು. ಹೋಟೆಲ್ ನಲ್ಲಿ ನಾನು ಸುಮಲತಾ ಓಡಾಡುತ್ತಿದ್ದ ಸಿಸಿ ಟಿವಿ ದೃಶ್ಯಾವಳಿಗಳನ್ನು ಪಡೆದು ಅದಕ್ಕೆ ಅಶ್ಲೀಲ ಚಿತ್ರ ಸೇರಿಸಿ ದುರ್ಬಳಕೆ ಪ್ಲಾನ್ ಮಾಡಿದ್ದರು ಎಂದು ಹೇಳಿದ್ದಾರೆ.

ದಂಗಾಗಿಸುತ್ತೆ ಈ ವಿಚಿತ್ರ ಮದುವೆ ನಿಶ್ಚಿತಾರ್ಥದ ಕತೆ…!

ಸಿಸಿ ಟಿವಿ ದೃಶ್ಯ ದುರ್ಬಳಕೆ ಮಾಡಿಕೊಂಡು ಒಂದು ಸ್ಟೋರಿ ಮಾಡಲು ಹೊರಟಿದ್ದರು ಎಂದು ಅವರ ಚಾನಲ್ ನಲ್ಲಿದ್ದ ಅಂಬರೀಶ್ ಅಭಿಮಾನಿಯೇ ನನಗೆ ಮಾಹಿತಿ ನೀಡಿದ್ದ. ಬಳಿಕ ಈ ಸಂದರ್ಭದಲ್ಲಿ ಇದು ಸರಿಯಲ್ಲ ಎಂದು ಪ್ಲಾನ್ ಕೈಬಿಟ್ಟರು ಎಂಬುದಾಗಿಯೂ ತಿಳಿಸಿದ್ದ. ಆಡಿಯೋ-ವಿಡಿಯೋ ಏನೇ ಮಾಡಿದರೂ ಇಂದಿನ ಟೆಕ್ನಾಲಜಿ ಇಷ್ಟೊಂದು ಮುಂದುವರೆದಿರುವಾಗ ಜನರು ಅದನ್ನೆಲ್ಲ ನಂಬುವುದಿಲ್ಲ. ಆದರೆ ಕುಮಾರಸ್ವಾಮಿಯವರ ಕೆಟ್ಟ ಮನಸ್ಥಿತಿ ಏನಿರಬಹುದು ? ಸಿಸಿ ಟಿವಿ ದೃಶ್ಯವನ್ನು ತಮ್ಮ ರಾಜಕಾರಣಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲು ಹೋಗಿದ್ದಾರೆ ಎಂದರೆ ಅವರು ಅದೆಂತ ಕೀಳುಮಟ್ಟದ ರಾಜಕಾರಣಕ್ಕಿಳಿದಿದ್ದಾರೆ ಎಂದು ಗುಡುಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...