alex Certify BIG NEWS: ಅಮೆರಿಕ, ಬ್ರಿಟನ್‌ಗೂ ಸೆಡ್ಡು ಹೊಡೆದ ಭಾರತ; ದಾಖಲೆಯ ಹೆಚ್ಚಳಕ್ಕೆ ಸಾಕ್ಷಿಯಾಗಲಿದೆ ವೇತನ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಮೆರಿಕ, ಬ್ರಿಟನ್‌ಗೂ ಸೆಡ್ಡು ಹೊಡೆದ ಭಾರತ; ದಾಖಲೆಯ ಹೆಚ್ಚಳಕ್ಕೆ ಸಾಕ್ಷಿಯಾಗಲಿದೆ ವೇತನ…..!

ಭಾರತವು 2023 ರಲ್ಲಿ ಅತ್ಯಧಿಕ ಜಾಗತಿಕ ವೇತನ ಹೆಚ್ಚಳಕ್ಕೆ ಸಾಕ್ಷಿಯಾಗಲಿದೆ. ವಿಯೆಟ್ನಾಂ ಮತ್ತು ಚೀನಾ ಕೂಡ ಇದೇ ಹಾದಿಯಲ್ಲಿದ್ದು, ಭಾರತದ ನಂತರದ ಸ್ಥಾನದಲ್ಲಿರಲಿವೆ. ಸಮೀಕ್ಷೆಯೊಂದರಲ್ಲಿ ಈ ಅಂಶ ಬಯಲಾಗಿದೆ. ಹಣದುಬ್ಬರ ಹೆಚ್ಚಳಕ್ಕೆ ಬ್ರೇಕ್‌ ಹಾಕುವ ಉದ್ದೇಶದಿಂದ 37 ಪ್ರತಿಶತದಷ್ಟು ದೇಶಗಳು ನೈಜ-ಅವಧಿಯ ವೇತನ ಏರಿಕೆಗೆ ಮುಂದಾಗಿವೆ. ಉದ್ಯೋಗಿಗಳ ಸಲಹಾ ಸಂಸ್ಥೆ ಇಸಿಎ ಇಂಟರ್‌ನ್ಯಾಶನಲ್‌ ಈ ಬಗ್ಗೆ ಸಮೀಕ್ಷೆ ನಡೆಸಿದೆ.

ಸಮೀಕ್ಷೆಯ ಪ್ರಕಾರ ಭಾರತ ಶೇ.4.6ರಷ್ಟು ಜಾಗತಿಕ ವೇತನ ಹೆಚ್ಚಳಕ್ಕೆ ಸಾಕ್ಷಿಯಾಗಲಿದೆ. ಟಾಪ್ 10 ದೇಶಗಳಲ್ಲಿ ಎಂಟು ಏಷ್ಯನ್‌ ರಾಷ್ಟ್ರಗಳು ನೈಜ ಸಂಬಳ ಹೆಚ್ಚಳವನ್ನು ಎದುರು ನೋಡುತ್ತಿವೆ. 2022 ರಲ್ಲಿ ಸರಾಸರಿ ವೇತನ ಶೇಕಡಾ 3.8 ರಷ್ಟು ಕಡಿಮೆಯಾಗಿತ್ತು. 68 ದೇಶಗಳು ಮತ್ತು ನಗರಗಳಲ್ಲಿರುವ 360 ಬಹುರಾಷ್ಟ್ರೀಯ ಕಂಪನಿಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದ ಸಮೀಕ್ಷೆಯಲ್ಲಿ ಈ ಅಂಶಗಳು ಬಹಿರಂಗವಾಗಿವೆ.

ಭಾರತದ ನಂತರ ವಿಯೆಟ್ನಾಂ (ಶೇ 4.0), ಚೀನಾ (ಶೇ 3.8), ಬ್ರೆಜಿಲ್ (ಶೇ 3.4) ಮತ್ತು ಸೌದಿ ಅರೇಬಿಯಾ (ಶೇ 2.3) 2023 ರಲ್ಲಿ ವೇತನ ಹೆಚ್ಚಳವನ್ನು ನಿರೀಕ್ಷಿಸುವ ರಾಷ್ಟ್ರಗಳಾಗಿವೆ. ಪಾಕಿಸ್ತಾನ (ಶೇ 9.9), ಘಾನಾ (-11.9 ಶೇಕಡಾ), ಟರ್ಕಿ (-14.4 ಶೇಕಡಾ) ಮತ್ತು ಶ್ರೀಲಂಕಾದಲ್ಲಿ (-20.5 ಶೇಕಡಾ) ವೇತನ ಇಳಿಕೆಯನ್ನು ನಿರೀಕ್ಷಿಸಲಾಗಿದೆ.

ಹಣದುಬ್ಬರ ಏರಿಕೆಯಿಂದ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶ  ಯುರೋಪ್ ಅಂತಾ ಹೇಳಲಾಗ್ತಿದೆ. 2000ನೇ ವರ್ಷದಲ್ಲಿ ಸಮೀಕ್ಷೆ  ಪ್ರಾರಂಭವಾದಾಗಿನಿಂದ ಈವರೆಗಿನ ಅವಧಿಯಲ್ಲಿ ಈ ಬಾರಿ ಬ್ರಿಟನ್‌ ಉದ್ಯೋಗಿಗಳು ಅತಿ ದೊಡ್ಡ ಆಘಾತ ಅನುಭವಿಸಿದ್ದಾರೆ. ಶೇ.3.5 ಸರಾಸರಿ ನಾಮಮಾತ್ರದ ವೇತನ ಹೆಚ್ಚಳದ ಹೊರತಾಗಿಯೂ, ಶೇ.9.1ರಷ್ಟು ಸರಾಸರಿ ಹಣದುಬ್ಬರದಿಂದಾಗಿ ಸಂಬಳ ಶೇ.5.6ರಷ್ಟು ಕುಸಿದಿದೆ.

2023 ರಲ್ಲಿ ಕೂಡ ವೇತನ ಶೇ.4 ರಷ್ಟು ಕುಸಿತ ಕಾಣುವ ಸಾಧ್ಯತೆ ಇದೆ. ಅಮೆರಿಕದಲ್ಲಿ ಈ ವರ್ಷ ಶೇ. 4.5 ರಷ್ಟು ನೈಜ-ಅವಧಿಯ ಕುಸಿತವಿದ್ದು, ಮುಂದಿನ ವರ್ಷ ಹಣದುಬ್ಬರದ ಇಳಿಕೆಯೊಂದಿಗೆ ಈ ಬೆಳವಣಿಗೆ ಹಿಮ್ಮುಖವಾಗುವ ನಿರೀಕ್ಷೆಯಿದೆ. ಶೇ.1ರಷ್ಟು ನೈಜ-ಅವಧಿಯ ವೇತನ ಹೆಚ್ಚಳಕ್ಕೆ ಅಮೆರಿಕ ಸಾಕ್ಷಿಯಾಗಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...