alex Certify BIG NEWS: ಅಮೆರಿಕದಲ್ಲಿ ಹೆಚ್ಚುತ್ತಲೇ ಇದೆ ಮಂಕಿಪಾಕ್ಸ್‌ ಸೋಂಕು, ಇನ್ನೂ ಎಲ್ಲೆಲ್ಲಿದೆ ಈ ಮಾರಣಾಂತಿಕ ಕಾಯಿಲೆಯ ಅಪಾಯ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಮೆರಿಕದಲ್ಲಿ ಹೆಚ್ಚುತ್ತಲೇ ಇದೆ ಮಂಕಿಪಾಕ್ಸ್‌ ಸೋಂಕು, ಇನ್ನೂ ಎಲ್ಲೆಲ್ಲಿದೆ ಈ ಮಾರಣಾಂತಿಕ ಕಾಯಿಲೆಯ ಅಪಾಯ…?

ಅಮೆರಿಕದಲ್ಲಿ ದಿನೇ ದಿನೇ ಮಂಕಿಪಾಕ್ಸ್‌ ಅಬ್ಬರ ಹೆಚ್ಚುತ್ತಲೇ ಇದೆ. ಈ ಸೋಂಕನ್ನು ತಡೆಗಟ್ಟಲು ಅಮೆರಿಕ ಸರ್ಕಾರ ಕಳೆದ ವಾರ ಮಂಕಿಪಾಕ್ಸ್ ಅನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿತ್ತು. ಪ್ರಸ್ತುತ ಈ ವೈರಲ್ ಕಾಯಿಲೆಯು ಸಲಿಂಗಕಾಮಿ ಮತ್ತು ದ್ವಿಲಿಂಗಿ ಪುರುಷರಲ್ಲಿ ಹೆಚ್ಚಾಗಿ ಹರಡುತ್ತಿದೆ. ಈ ಕಾಯಿಲೆ ಇತರರ ಜನಸಂಖ್ಯೆಯ ಮೇಲೂ ಪರಿಣಾಮ ಬೀರಬಹುದು ಅನ್ನೋದು ತಜ್ಞರ ಅಭಿಪ್ರಾಯ.

ಲಸಿಕೆ ಇಲ್ಲದೇ ಇರುವುದರಿಂದ ಮಂಕಿಪಾಕ್ಸ್‌ ಹತೋಟಿಗೆ ಬರುತ್ತಿಲ್ಲ. ಮಂಕಿಪಾಕ್ಸ್‌ಗೆ ತುತ್ತಾದವರ ದೇಹದ ಮೇಲೆ ಕೀವು ತುಂಬಿದ ಹುಣ್ಣುಗಳು ಕಾಣಿಸಿಕೊಳ್ಳುತ್ತವೆ. ಅವುಗಳ ಸಂಪರ್ಕದ ಮೂಲಕವೂ ಸೋಂಕು ಹರಡುತ್ತದೆ. ಇದು ಮಾರಣಾಂತಿಕ ಕಾಯಿಲೆಯೂ ಆಗಿರುವುದರಿಂದ ಆತಂಕ ಹೆಚ್ಚಾಗಿದೆ.

ಮಂಕಿಪಾಕ್ಸ್ ಸೋಂಕು ಯಾರಿಗೆ ತಗುಲುತ್ತಿದೆ?

ವಿಶ್ವ ಆರೋಗ್ಯ ಸಂಸ್ಥೆ ಕಳೆದ ತಿಂಗಳು ಮಂಕಿಪಾಕ್ಸ್ ಅನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿತ್ತು. ಲೆಕ್ಕಾಚಾರದ ಪ್ರಕಾರ ಈ ವೈರಸ್ ಸ್ಥಳೀಯವಲ್ಲದ 80 ದೇಶಗಳಲ್ಲಿ ಹಬ್ಬಿದೆ. ಸುಮಾರು 26,500 ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. US ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್‌ನ ತಾಂತ್ರಿಕ ವರದಿಯ ಪ್ರಕಾರ, ದೇಶದಲ್ಲಿ ಸಂಭವಿಸಿದ 99.1 ಪ್ರತಿಶತ ಮಂಕಿಪಾಕ್ಸ್ ಪ್ರಕರಣಗಳು ಜುಲೈ 25ರ ಹೊತ್ತಿಗೆ ಜನನದ ಸಮಯದಲ್ಲಿ ಪುರುಷ ಲಿಂಗವನ್ನು ನಿಯೋಜಿಸಿದವರಲ್ಲಿ ಪತ್ತೆಯಾಗಿವೆ.

99 ಪ್ರತಿಶತ ಸೋಂಕುಗಳು ಇತರ ಪುರುಷರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದವರಲ್ಲಿ ಕಾಣಿಸಿಕೊಂಡಿದೆ.  ಪುರುಷರಲ್ಲಿ ವರದಿಯಾದ ಒಟ್ಟು ಪ್ರಕರಣಗಳಲ್ಲಿ, ಸುಮಾರು ಶೇ.38ರಷ್ಟು,  ಬಿಳಿ, ಹಿಸ್ಪಾನಿಕ್ ಅಲ್ಲದ ಪುರುಷರಲ್ಲಿ ಕಂಡುಬಂದರೆ, ಶೇ.26ರಷ್ಟು ಕೇಸ್‌ಗಳು ಕಪ್ಪು ಪುರುಷರಲ್ಲಿ ಮತ್ತು 32 ಪ್ರತಿಶತ ಹಿಸ್ಪಾನಿಕ್ ಪುರುಷರಲ್ಲಿ ಕಂಡುಬಂದಿದೆ. ಪುರುಷರಲ್ಲಿ ಲೈಂಗಿಕ ಪ್ರಸರಣದ ಈ ಮಾದರಿಯು ವಿಶಿಷ್ಟವಲ್ಲ. ಆಫ್ರಿಕಾದಲ್ಲಿ, 1970ರ ದಶಕದಿಂದಲೂ ಮಂಕಿಪಾಕ್ಸ್ ಹರಡುತ್ತಿದೆ. 60 ಪ್ರತಿಶತ ಪ್ರಕರಣಗಳು ಪುರುಷರಲ್ಲಿ ಮತ್ತು 40 ಪ್ರತಿಶತ ಮಹಿಳೆಯರಲ್ಲಿ ಕಂಡುಬರುತ್ತವೆ.

ವೈರಸ್ “ಗುದ ಗ್ರಹಿಕೆಯ ಸಂಭೋಗದ ಮೂಲಕ ಮತ್ತು ಸ್ವಲ್ಪ ಮಟ್ಟಿಗೆ ಮೌಖಿಕ ಸಂಭೋಗದ ಮೂಲಕ ಬಹಳ ಪರಿಣಾಮಕಾರಿಯಾಗಿ ಹರಡುತ್ತದೆ” ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹೇಳಿದ್ದಾರೆ.

ಬೇರೆ ಯಾರಿಗೆಲ್ಲ ಅಪಾಯ?

ಮಂಕಿಪಾಕ್ಸ್ ಪುರುಷರೊಂದಿಗೆ ಲೈಂಗಿಕತೆಯನ್ನು ಹೊಂದಿರುವ ಪುರುಷರ ಸಮುದಾಯದಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಆದ್ರೆ ಅವರಿಗೆ ಮಾತ್ರ ಸೋಂಕು ತಗುಲುತ್ತದೆ ಎಂದರ್ಥವಲ್ಲ. ಸಾಮಾನ್ಯ ಜನರು ಕೂಡ ಈ ಕಾಯಿಲೆಗೆ ತುತ್ತಾಗಬಹುದು. ಸೋಂಕಿತರ ಕುಟುಂಬ ಸದಸ್ಯರಿಗೆ, ಅವರೊಂದಿಗೆ ಸಂಪರ್ಕ ಹೊಂದಿರುವವರಿಗೆ ಹರಡುತ್ತದೆ. ಮಸಾಜ್ ಪಾರ್ಲರ್‌ಗಳು ಅಥವಾ ಸ್ಪಾಗಳ ಮೂಲಕವೂ ವೈರಸ್ ಹರಡಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಮಂಕಿಪಾಕ್ಸ್‌ ಹೆಚ್ಚಾಗಿ ಹರಡುವ ಸಾಧ್ಯತೆ ಇರುವ ಸ್ಥಳಗಳೆಂದರೆ ಕಾಲೇಜು ವಸತಿ ನಿಲಯಗಳು, ಹೆಲ್ತ್‌ ಕ್ಲಬ್‌ಗಳು ಮತ್ತು ಕ್ರೀಡಾ ತಂಡಗಳು. ಚರ್ಮದಿಂದ ಚರ್ಮಕ್ಕೆ ನಿಕಟ ಸಂಪರ್ಕವಾದಾಗ ಈ ಸೋಂಕು ಹರಡುತ್ತದೆ. ಹಾಗಾಗಿ ಆಟಗಾರರಿಗೆ ಅಪಾಯ ಹೆಚ್ಚು. ಕುಸ್ತಿ, ಫುಟ್ಬಾಲ್, ರಗ್ಬಿ ಮತ್ತು ಇತರ ಕ್ರೀಡಾ ತಂಡಗಳು ಮಂಕಿಪಾಕ್ಸ್‌ ಬಗ್ಗೆ ಜಾಗೃತೆ ವಹಿಸಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...