alex Certify BIG NEWS: ಅಗ್ಗದ ಬೆಲೆಗೆ ಸಿಗಲಿದೆ 4ಜಿ ಲ್ಯಾಪ್ ಟಾಪ್; ಕೇವಲ 15 ಸಾವಿರ ರೂಪಾಯಿ ನಿಗದಿಪಡಿಸಿದ ಜಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಗ್ಗದ ಬೆಲೆಗೆ ಸಿಗಲಿದೆ 4ಜಿ ಲ್ಯಾಪ್ ಟಾಪ್; ಕೇವಲ 15 ಸಾವಿರ ರೂಪಾಯಿ ನಿಗದಿಪಡಿಸಿದ ಜಿಯೋ

ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಟೆಲಿಕಾಂ ಕ್ಷೇತ್ರ ಪ್ರವೇಶಿಸಿದ ಬಳಿಕ ಹಲವು ಕ್ರಾಂತಿಕಾರಿಕ ಬದಲಾವಣೆಗಳಾಗಿವೆ. ಅತ್ಯಂತ ಕಡಿಮೆ ದರದಲ್ಲಿ ಇಂಟರ್ನೆಟ್ ಸೇವೆ ನೀಡುವ ಮೂಲಕ ದೊಡ್ಡ ಸದ್ದು ಮಾಡಿದ್ದ ರಿಲಯನ್ಸ್ ಜಿಯೋ ಇದೀಗ ಬಳಕೆದಾರರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ.

ಇದೀಗ ಮತ್ತೊಂದು ಮಹತ್ವದ ಯೋಜನೆಗೆ ರಿಲಯನ್ಸ್ ಜಿಯೋ ಕೈಹಾಕಿದ್ದು, ಕೇವಲ 15 ಸಾವಿರ ರೂಪಾಯಿಗಳಿಗೆ 4ಜಿ ಸಿಮ್ ಹೊಂದಿದ ಲ್ಯಾಪ್ ಟಾಪ್ ಪರಿಚಯಿಸಲು ನಿರ್ಧರಿಸಿದೆ. ಇದಕ್ಕಾಗಿ ಈಗಾಗಲೇ ಎಲ್ಲ ಸಿದ್ಧತೆಗಳು ನಡೆದಿದ್ದು, ಮುಂದಿನ ಮೂರು ತಿಂಗಳಲ್ಲಿ ಸಾಮಾನ್ಯ ಗ್ರಾಹಕರಿಗೂ ಇದು ಲಭ್ಯವಾಗಲಿದೆ.

ಜಿಯೋ ಬುಕ್ ಹೆಸರಿನ ಈ ಲ್ಯಾಪ್ಟಾಪ್ ಗೆ ಕ್ವಾಲ್ಕಾಮ್, ಕಂಪ್ಯೂಟರ್ ಚಿಪ್ಸ್ ಒದಗಿಸಲಿದ್ದರೆ ಮೈಕ್ರೋಸಾಫ್ಟ್, ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಬೆಂಬಲ ನೀಡಲಿದೆ. ಈಗಾಗಲೇ 42 ಕೋಟಿ ಗ್ರಾಹಕರನ್ನು ಹೊಂದಿರುವ ರಿಲಯನ್ಸ್ ಜಿಯೋ ಮುಂದಿನ ದಿನಗಳಲ್ಲಿ ಶಾಲೆಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಈ ಅಗ್ಗದ ದರದ ಲ್ಯಾಪ್ಟಾಪ್ ಗಳನ್ನು ಪೂರೈಸಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...