alex Certify ಭಾರತ್ ಬಂದ್: ಮಾ.28 ಮತ್ತು 29 ಮುಷ್ಕರದಂದು ಏನಿರುತ್ತೆ..? ಏನಿರಲ್ಲ…? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತ್ ಬಂದ್: ಮಾ.28 ಮತ್ತು 29 ಮುಷ್ಕರದಂದು ಏನಿರುತ್ತೆ..? ಏನಿರಲ್ಲ…? ಇಲ್ಲಿದೆ ಮಾಹಿತಿ

ನವದೆಹಲಿ: ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಮಾರ್ಚ್ 28 ಮತ್ತು 29 ರಂದು ದೇಶವ್ಯಾಪಿ ಮುಷ್ಕರಕ್ಕೆ(ಭಾರತ್ ಬಂದ್) ಕೇಂದ್ರ ಕಾರ್ಮಿಕ ಸಂಘಟನೆಗಳ ಏಕೀಕೃತ ವೇದಿಕೆ ಕರೆ ನೀಡಿದೆ.

ಸೋಮವಾರ ಮತ್ತು ಮಂಗಳವಾರ ಬ್ಯಾಂಕಿಂಗ್, ಸಾರಿಗೆ ಸೇವೆಯಲ್ಲಿ ವ್ಯತ್ಯಯವಾಗಲಿದೆ.

ಬ್ಯಾಂಕಿಂಗ್, ವಿಮೆ

ಮಾರ್ಚ್ 28 ಮತ್ತು 29 ರಂದು ನಡೆಯುವ ಮುಷ್ಕರದಿಂದಾಗಿ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ತನ್ನ ಗ್ರಾಹಕರಿಗೆ ಈಗಾಗಲೇ ತಿಳಿಸಿದೆ.

ಮುಷ್ಕರದಿಂದ ಬ್ಯಾಂಕ್‌ ನಲ್ಲಿ ಕೆಲಸವು ಸೀಮಿತ ಪ್ರಮಾಣದಲ್ಲಿರಲಿದ್ದು, ಗ್ರಾಹಕರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಬ್ಯಾಂಕಿಂಗ್ ವಲಯದ ಜೊತೆಗೆ ವಿಮಾ ವಲಯದ ಒಕ್ಕೂಟಗಳು ಬಂದ್‌ ಗೆ ಬೆಂಬಲ ವ್ಯಕ್ತಪಡಿಸಿವೆ.

ಸಾರಿಗೆ

ರೈಲ್ವೇ ಮತ್ತು ರಕ್ಷಣಾ ವಲಯಗಳ ಒಕ್ಕೂಟಗಳು ಹತ್ತಾರು ಸ್ಥಳಗಳಲ್ಲಿ ಮುಷ್ಕರ ಕೈಗೊಳ್ಳಲಿವೆ ಎಂದು ಟ್ರೇಡ್ ಯೂನಿಯನ್‌ ಗಳ ಹೇಳಿಕೆ ತಿಳಿಸಿದೆ.

ಹರ್ಯಾಣ ಮತ್ತು ಚಂಡೀಗಢದಲ್ಲಿ ಎಸ್ಮಾ(ಅಗತ್ಯ ಸೇವೆಗಳ ನಿರ್ವಹಣೆ ಕಾಯಿದೆ) ಬೆದರಿಕೆಯ ನಡುವೆಯೂ ರಸ್ತೆ ಮಾರ್ಗಗಳು, ಸಾರಿಗೆ ಕಾರ್ಮಿಕರು ಮತ್ತು ವಿದ್ಯುತ್ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ ಎಂದು ಟ್ರೇಡ್ ಯೂನಿಯನ್ ಹೇಳಿಕೆಯಲ್ಲಿ ತಿಳಿಸಿದೆ.

ಬ್ಯಾಂಕ್‌ ಗಳ ಹೊರತಾಗಿ, ಕಲ್ಲಿದ್ದಲು, ಉಕ್ಕು, ತೈಲ, ಟೆಲಿಕಾಂ, ಅಂಚೆ, ಆದಾಯ ತೆರಿಗೆ, ತಾಮ್ರ, ಬ್ಯಾಂಕ್‌ಗಳು, ವಿಮೆ ಮುಂತಾದ ಕ್ಷೇತ್ರಗಳ ಒಕ್ಕೂಟಗಳು ಮುಷ್ಕರ ನೋಟಿಸ್‌ ಗಳನ್ನು ನೀಡಿವೆ.

ಪಶ್ಚಿಮ ಬಂಗಾಳದಲ್ಲಿ ಸರ್ಕಾರಿ ಕಚೇರಿಗಳು ಓಪನ್

ಮಾರ್ಚ್ 28 ಮತ್ತು 29 ರಂದು 48 ಗಂಟೆಗಳ ರಾಷ್ಟ್ರವ್ಯಾಪಿ ಮುಷ್ಕರ/ಬಂದ್‌ಗೆ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದರೂ, ಪಶ್ಚಿಮ ಬಂಗಾಳದ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳು ತೆರೆದಿರುತ್ತವೆ. ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...