alex Certify ʼಬರ್ಮುಡಾ ಟ್ರಯಾಂಗಲ್ʼ ಕುರಿತ ಕುತೂಹಲಗಳಿಗೆ ತೆರೆ ಎಳೆಯಲಿದೆ ಈ ಹಡಗು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬರ್ಮುಡಾ ಟ್ರಯಾಂಗಲ್ʼ ಕುರಿತ ಕುತೂಹಲಗಳಿಗೆ ತೆರೆ ಎಳೆಯಲಿದೆ ಈ ಹಡಗು

ಹಲವಾರು ವಿಮಾನಗಳು ಮತ್ತು ಹಡಗುಗಳು ಈ ಪ್ರದೇಶದಲ್ಲಿ ನಿಗೂಢವಾಗಿ ಕಣ್ಮರೆಯಾಗುತ್ತಿರುವ ವರದಿಗಳ ಬಳಿಕ ಬರ್ಮುಡಾ ಟ್ರಯಾಂಗಲ್ ಪಿತೂರಿ ಸಿದ್ಧಾಂತಗಳ ಭಾಗವಾಗಿದೆ.

ಉತ್ತರ ಅಟ್ಲಾಂಟಿಕ್ ಮಹಾಸಾಗರದ ಪಶ್ಚಿಮ ಭಾಗದಲ್ಲಿರುವ ಇದನ್ನು ಡೆವಿಲ್ಸ್ ಟ್ರಯಾಂಗಲ್ ಎಂದೂ ಕರೆಯುತ್ತಾರೆ. ಈಗ, ಟ್ರಾವೆಲ್ ಏಜೆನ್ಸಿಯೊಂದು ಕ್ರೂಸ್ ಹಡಗಿನಲ್ಲಿ ಈ ಪ್ರದೇಶದ ಸುತ್ತ ಪ್ರವಾಸಕ್ಕೆ ಆಹ್ವಾನಿಸುತ್ತಿದೆ. ಕಡಗು ಕಣ್ಮರೆಯಾದಲ್ಲಿ ಸಂಪೂರ್ಣ ಮರುಪಾವತಿಯ ಭರವಸೆಯನ್ನು ಪ್ರಯಾಣಿಕರಿಗೆ ನೀಡಿದ್ದು ರೋಮಾಂಚನಕಾರಿ ಕೊಡುಗೆಯಾಗಿದೆ.

ಪ್ರಾಚೀನ ರಹಸ್ಯಗಳ ಕ್ರೂಸ್ ಪ್ರವಾಸವು ಟ್ವಿಲೈಟ್ ಬರ್ಮುಡಾ ಟ್ರಯಾಂಗಲ್ ಕ್ರೂಸ್ ಅನ್ನು ಗಾಜಿನ ತಳದೊಂದಿಗೆ ನಿರ್ಮಿಸಿದ್ದು, ಚರ್ಚೆಗಳು, ಪ್ರಸ್ತುತಿಗಳು ಮತ್ತು ಸಂವಾದಾತ್ಮಕ ಅಧಿವೇಶನವನ್ನು ಒಳಗೊಂಡಿದೆ. ಈ ಪ್ರದೇಶದ ಬಗ್ಗೆ ಕುತೂಹಲವಿದ್ದರೆ, ನೀವು ಪ್ರವಾಸಕ್ಕೆ ಹೋಗಿ, ವಾಸ್ತವವನ್ನು ವೀಕ್ಷಿಸಬಹುದು.

BIG NEWS: ʼಸ್ಕೂಲ್ ಆನ್ ವ್ಹೀಲ್ಸ್ʼ ವಿದ್ಯಾರ್ಥಿಗಳಿಗೆ ಇನ್ನು ಬಿಸಿಯೂಟ

ಅಟ್ಲಾಂಟಿಕ್ ಸಾಗರದಲ್ಲಿ 5 ಲಕ್ಷ ಚ.ಕಿ.ಮೀ. ಹರಡಿರುವ ಈ ಪ್ರದೇಶ ಹಲವು ದಶಕಗಳಿಂದ ಅನೇಕ ವಿಜ್ಞಾನಿಗಳನ್ನು ದಿಗ್ಭ್ರಮೆಗೊಳಿಸಿದೆ. ಬರ್ಮುಡಾ ಟ್ರಯಾಂಗಲ್ ದಾಟುವಾಗ ಕನಿಷ್ಠ 75 ವಿಮಾನಗಳು ಮತ್ತು ನೂರಾರು ಹಡಗುಗಳು ನಿಗೂಢವಾಗಿ ಕಣ್ಮರೆಯಾಗಿವೆ ಎಂದು ವರದಿಯಾಗಿದೆ. ಇದಕ್ಕೆ ಕಾರಣ ಇನ್ನೂ ಪತ್ತೆಯಾಗಿಲ್ಲ. ಉಪ-ಸಮುದ್ರ ಪಿರಮಿಡ್ಗಳು, ಷಡ್ಭುಜಾಕೃತಿಯ ಮೋಡಗಳು ಮತ್ತು ಅನ್ಯಲೋಕದ ನೆಲೆಗಳ ಕುರಿತು ಹಲವು ಸಿದ್ಧಾಂತಗಳಿಗೆ ಈ ರಹಸ್ಯವು ಜನ್ಮ ನೀಡಿದೆ.

ಮುಂದಿನ ಕ್ರೂಸ್ ಪ್ರವಾಸಕ್ಕೆ £1,450 (ಅಂದಾಜು 1,41,360 ರೂ.) ಟಿಕೆಟ್ ನಿಗದಿಪಡಿಸಲಾಗಿದೆ. ಅಟ್ಲಾಂಟಿಕ್ ಸಾಗರದಲ್ಲಿ ನ್ಯೂಯಾರ್ಕ್ನಿಂದ ಬರ್ಮುಡಾಗೆ ಹೊರಡಲಿದೆ. ಬರ್ಮುಡಾ ಟ್ರಯಾಂಗಲ್ನಲ್ಲಿ ಈ ಹಡಗು ಕಣ್ಮರೆಯಾದರೆ ಪ್ರಯಾಣಿಕರಿಗೆ ಟಿಕೆಟ್ ಹಣವನ್ನು ಪೂರ್ತಿಯಾಗಿ ಮರಳಿಸುವ ಆಫರ್ ನೀಡಲಾಗಿದೆ. ಪ್ರವಾಸದ ಜತೆಗೆ ನಿಕ್ ಪೋಪ್, ಪೀಟರ್ ರಾಬಿನ್ಸ್, ನಿಕ್ ರೆಡ್ಫರ್ನ್ ಅವರಂತಹ ಗಣ್ಯರಿಂದ ಉಪನ್ಯಾಸಗಳನ್ನೂ ಆಯೋಜಿಸಲಾಗಿದೆ. ಗುಂಪಾಗಿ ಕಡಲ ತೀರದಲ್ಲಿ ವಿಹಾರ ಮತ್ತು ಉಪನ್ಯಾಸಕರೊಂದಿಗೆ ಸಂವಾದಗಳನ್ನೂ ಏರ್ಪಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...