alex Certify ಗೂಗಲ್​ ಸಿಇಓ ಸುಂದರ್​ ಪಿಚ್ಛೈ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಬೆಂಗಳೂರು ಟೆಕ್ಕಿ: ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೂಗಲ್​ ಸಿಇಓ ಸುಂದರ್​ ಪಿಚ್ಛೈ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಬೆಂಗಳೂರು ಟೆಕ್ಕಿ: ಫೋಟೋ ವೈರಲ್

ಬೆಂಗಳೂರು ಮೂಲದ ತಂತ್ರಜ್ಞಾನ ತಜ್ಞ ಹಾಗೂ ಭಾರತದ ರಿಟೂಲ್​ ಗ್ರೌಥ್​ ಮುಖ್ಯಸ್ಥ ಸಿದ್​ ಪುರಿ ಸ್ಯಾನ್​ಫ್ರಾನ್ಸಿಸ್ಕೋದಲ್ಲಿ ಗೂ್ಗಲ್​ ಹಾಗೂ ಆಲ್ಫಾಬೆಟ್​ ಸಿಇಓ ಸುಂದರ್​ ಪಿಚೈರನ್ನು ಭೇಟಿಯಾಗಿದ್ದಾರೆ. ಪುರಿ ಇಬ್ಬರು ಜೊತೆಯಾಗಿ ತೆಗೆಸಿದ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದು ಈ ಫೋಟೋ ಸಖತ್​ ವೈರಲ್​ ಆಗಿದೆ.

ಈ ಫೋಟೋದಲ್ಲಿ ಸುಂದರ್ ಪಿಚ್ಚೈ ಕ್ಯಾಶುವಲ್​ ಉಡುಪು ಧರಿಸಿರೋದನ್ನು ಕಾಣಬಹುದಾಗಿದೆ. ನೀಲಿ ಬಣ್ಣದ ಜೀನ್ಸ್​ ಹಾಗೂ ಜಾಕೆಟ್​ ಜೊತೆಯಲ್ಲಿ ಕಪ್ಪು ಬಣ್ಣದ ಸನ್​ಗ್ಲಾಸ್​ನ್ನು ಸುಂದರ್ ಪಿಚ್ಚೈ ಧರಿಸಿದ್ದಾರೆ. ಅಲ್ಲದೇ ಇಷ್ಟು ದೊಡ್ಡ ಹುದ್ದೆಯಲ್ಲಿರುವ ಸುಂದರ್​ ಪಿಚ್ಚೈ ಸುತ್ತ ಯಾವುದೇ ಭದ್ರತಾ ಸಿಬ್ಬಂದಿ ಇಲ್ಲದೇ ಇರೋದನ್ನ ಸಹ ಫೋಟೋದಲ್ಲಿ ಗಮನಿಸಬಹುದಾಗಿದೆ. ಪುರಿ ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದು ಸುಂದರ್​ಪಿಚ್ಚೈರ ಭದ್ರತಾ ಸಿಬ್ಬಂದಿಯೇ ನಮ್ಮ ಫೋಟೋ ಕ್ಲಿಕ್ಕಿಸಿದ್ದಾರೆ ಎಂದು ಹೇಳಿದ್ದಾರೆ.

ಈ ಫೋಟೋವನ್ನು ಪುರಿ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡುತ್ತಿದ್ದಂತೆಯೇ ಲೈಕ್​ ಹಾಗೂ ಕಮೆಂಟ್​ಗಳ ಸುರಿಮಳೆಯೇ ಹರಿದಿದೆ. ಅಂದಹಾಗೆ ಸುಂದರ್​ ಪಿಚ್ಚೈ ಮೂಲತಃ ಭಾರತದವರಾಗಿದ್ದು ಗೂಗಲ್​ ಹಾಗೂ ಅದರ ಮಾತೃಸಂಸ್ಥೆ ಆಲ್ಫಾಬೆಟ್​​ನ ಸಿಇಓ ಆಗಿದ್ದಾರೆ.

ಸುಂದರ್ ಪಿಚೈ, ಮೂಲತಃ ಭಾರತದವರು, ಗೂಗಲ್ ಮತ್ತು ಅದರ ಮಾತೃ ಸಂಸ್ಥೆ ಆಲ್ಫಾಬೆಟ್ ಎರಡರ ಗೌರವಾನ್ವಿತ CEO ಆಗಿದ್ದಾರೆ. 2022 ರಲ್ಲಿ, ಪಿಚೈ ಅವರು ಸುಮಾರು $226 ಮಿಲಿಯನ್ ನಷ್ಟು ಪ್ರಭಾವಶಾಲಿ ಒಟ್ಟು ಪರಿಹಾರ ಪ್ಯಾಕೇಜ್ ಅನ್ನು ಪಡೆದರು, ಜಾಗತಿಕವಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕಾರ್ಪೊರೇಟ್ ನಾಯಕರಲ್ಲಿ ಅವರೂ ಒಬ್ಬರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...