alex Certify ನಿರರ್ಗಳವಾಗಿ ಇಂಗ್ಲೀಷ್ ನಲ್ಲಿ ಮಾತನಾಡಿದ ಭಿಕ್ಷುಕಿ..! ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರರ್ಗಳವಾಗಿ ಇಂಗ್ಲೀಷ್ ನಲ್ಲಿ ಮಾತನಾಡಿದ ಭಿಕ್ಷುಕಿ..! ವೈರಲ್​ ಆಯ್ತು ವಿಡಿಯೋ

ಬೆಂಗಳೂರಿನಲ್ಲಿ ಚಿಂದಿ ಆಯುವ ಮಹಿಳೆಯ ವಿಡಿಯೋವೊಂದು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಸೆಸಿಲಿಯಾ ಎಂಬ ಹೆಸರಿನ ಭಿಕ್ಷುಕಿ ಸುಲಲಿತವಾಗಿ ಇಂಗ್ಲೀಷ್​ನಲ್ಲಿ ಮಾತನಾಡಿದ್ದು ಈ ವಿಡಿಯೋ ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಈ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಶಾಚಿನಾ ಹೆಗ್ಗಾರ್ ಎಂಬವರು ಶೇರ್​ ಮಾಡಿದ್ದಾರೆ.

ಪ್ರಿಯತಮೆಗೆ ಉಡುಗೊರೆ ಕೊಡಲು ದರೋಡೆಗಿಳಿದ ಯುವಕ

ಬೆಂಗಳೂರಿನ ಬೀದಿಯೊಂದರಲ್ಲಿ ಸೆಸಿಲಿಯಾರನ್ನ ಭೇಟಿಯಾದ ಶಾಚಿನಾ 2 ವಿಡಿಯೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಒಂದು ವಿಡಿಯೋದಲ್ಲಿ ಈಕೆ ತನ್ನನ್ನು ಪರಿಚಯಿಸಿಕೊಂಡು ದೇವರ ಹಾಡನ್ನು ಹಾಡಿದ್ದಾಳೆ. ಹೆಗ್ಗಾರ್​ ಸಿಸಿಲಿಯಾ ಬಳಿ ನೀವು ಒಬ್ಬಂಟಿಯಾಗಿದ್ದೀರೆ ಎಂದು ಕೇಳಿದ ತಕ್ಷಣ ಸಿಸಿಲಿಯಾ ಮೇರಿ ದೇವರ ಫೋಟೋ ತೋರಿಸಿ ನಾನೆಂದಿಗೂ ಒಬ್ಬಂಟಿಯಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...