alex Certify ಅಬುಧಾಬಿ ಲಾಟರಿ ಶೋನಲ್ಲಿ ಬರೋಬ್ಬರಿ 44 ಕೋಟಿ ರೂ. ಗೆದ್ದ ಬೆಂಗಳೂರು ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬುಧಾಬಿ ಲಾಟರಿ ಶೋನಲ್ಲಿ ಬರೋಬ್ಬರಿ 44 ಕೋಟಿ ರೂ. ಗೆದ್ದ ಬೆಂಗಳೂರು ವ್ಯಕ್ತಿ

lottery

ಅಬುಧಾಬಿಯ ಜನಪ್ರಿಯ ಸೀರೀಸ್ 250 ಬಿಗ್ ಟಿಕೆಟ್ ಲೈವ್‌ ಡ್ರಾ ಲಾಟರಿಯಲ್ಲಿ ಬೆಂಗಳೂರು ಮೂಲದ ಅರುಣ್ ಕುಮಾರ್‌ ವಟಕ್ಕೇ ₹44,75,00,000 ಗಳ ಬಹುಮಾನ ಗೆದ್ದಿದ್ದಾರೆ.

ಜಗತ್ತಿನಾದ್ಯಂತ ಜನರು ಲಾಟರಿ ಟಿಕೆಟ್‌ಗಳನ್ನು ಖರೀದಿಸಬಹುದಾಗಿದ್ದು, ನೇರ ಪ್ರಸಾರದ ಸಂದರ್ಭದಲ್ಲಿ ಅವರು ಗೆದ್ದ ಹಣ ಹಾಗೂ ಲಕ್ಸೂರಿ ಕಾರುಗಳ ವಿವರಗಳನ್ನು ಬಿತ್ತರಿಸಲಾಗುವುದು. ಇದೀಗ ಅರುಣ್ ಕುಮಾರ್‌ ವಟಕ್ಕೆ ಕೊರೊತ್‌ ಅವರು 20 ದಶಲಕ್ಷ ದೋಹಾ (₹44,75,00,000) ಗೆದ್ದಿದ್ದಾರೆ.

ಗಲ್ಪ್ ನ್ಯೂಸ್ ಪ್ರಕಾರ, ತನ್ನ ಗೆಳೆಯರಿಂದ ಬಿಗ್ ಟಿಕೆಟ್ ಲೈವ್‌ ಬಗ್ಗೆ ಕೇಳಿ ತಿಳಿದುಕೊಂಡ ಅರುಣ್, ಆನ್ಲೈನ್‌ನಲ್ಲಿ ಟಿಕೆಟ್‌ಗಳನ್ನು ಖರೀದಿ ಮಾಡಲು ಆರಂಭಿಸಿದ್ದರು. ಮಾರ್ಚ್ 22ರಂದು ಖರೀದಿ ಮಾಡಿದ ಟಿಕೆಟ್‌ಗೆ ಅರುಣ್‌ ಈ ಭಾರೀ ಮೊತ್ತ ಗೆದ್ದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...