alex Certify ಪ್ರವೇಶ ನಿರಾಕರಿಸಿದವರೇ ಈಗ ಕೋರುತ್ತಿದ್ದಾರೆ ಸ್ವಾಗತ: ಹಣಕಾಸು ತಜ್ಞ ಶರತ್​ ಹೆಗಡೆ ಯಶಸ್ಸಿನ ಮಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವೇಶ ನಿರಾಕರಿಸಿದವರೇ ಈಗ ಕೋರುತ್ತಿದ್ದಾರೆ ಸ್ವಾಗತ: ಹಣಕಾಸು ತಜ್ಞ ಶರತ್​ ಹೆಗಡೆ ಯಶಸ್ಸಿನ ಮಾತು

ಬೆಂಗಳೂರು: ಆಗುವುದೆಲ್ಲವೂ ಒಳ್ಳೆಯದ್ದಕ್ಕೇ ಎನ್ನುವ ಮಾತಿದೆ. ಅದು ಎಷ್ಟು ನಿಜ ಎನ್ನುವುದನ್ನು 2 ಮಿಲಿಯನ್‌ಗಿಂತಲೂ ಹೆಚ್ಚು ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿರುವ ಹಣಕಾಸು ವಿಷಯದ ತಜ್ಞ ಬೆಂಗಳೂರಿನ ಶರಣ್ ಹೆಗಡೆ ವಿವರಿಸಿದ್ದಾರೆ.

ಇವರು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ 98 ಶೇಕಡಾವನ್ನು ಗಳಿಸಿದ್ದರೂ, ಮೂರು ವರ್ಷಗಳ ಹಿಂದೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಬೆಂಗಳೂರು (ಸಿಎಟಿ) ಇವರಿಗೆ ಸೀಟು ಸಿಗಲಿಲ್ಲ. ಇದರಿಂದ ಆರಂಭದಲ್ಲಿ ಬೇಸರ ವ್ಯಕ್ತಪಡಿಸಿದ ಶರಣ್​ ಅವರು ಹತಾಷರಾಗದೇ ಅಮೆರಿಕದಲ್ಲಿ ತಮ್ಮ ಪದವಿಯನ್ನು ಮುಗಿಸಲು ನಿರ್ಧರಿಸಿದರು.

ಅಲ್ಲಿಂದ ಅವರು ಹಣಕಾಸು ವಿಷಯ ರಚನೆಯಲ್ಲಿ ಪ್ರಾವೀಣ್ಯತೆ ಪಡೆದರು. ಈಗ ಅವರು ಭಾರತದ ಅತ್ಯಂತ ಜನಪ್ರಿಯ ಹಣಕಾಸು ವಿಷಯ ರಚನೆಕಾರರಲ್ಲಿ ಒಬ್ಬರು ಮತ್ತು ವೈಯಕ್ತಿಕ ಹಣಕಾಸು ಮತ್ತು ಹಣ ನಿರ್ವಹಣೆಕಾರರಾಗಿದ್ದಾರೆ. ಅವರ ಜನಪ್ರಿಯತೆ ನೋಡಿ ಇದೀಗ ಐಐಎಂ-ಬೆಂಗಳೂರು ಅವರಿಗೆ ಸ್ವಾಗತ ಕೋರಿದೆ. ಅತಿಥಿ ಭಾಷಣಕಾರರಾಗಿ ಅವರನ್ನು ಆಹ್ವಾನಿಸಿದೆ.

ಈ ವಿಷಯವನ್ನೇ ಶರತ್​ ಅವರು ಈಗ ವಿವರಿಸಿದ್ದಾರೆ. ತಾವು ಈ ಮೊದಲು ಅನುಭವಿಸಿದ್ದ ನೋವಿನ ಬಗ್ಗೆಯೂ ವಿವರಣೆ ನೀಡಿದ್ದಾರೆ. ಬೆಂಗಳೂರಿನಲ್ಲಿ ರೂ. 5,000 ಸ್ಟೈಪೆಂಡ್​ ಪಡೆಯುತ್ತಿದ್ದ ದಿನಗಳ ಬಗ್ಗೆಯೂ ವಿವರಿಸಿ, ಆಗುವುದೆಲ್ಲವೂ ಒಳ್ಳೆಯದ್ದಕ್ಕೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...