alex Certify ಹೀಗೂ ಉಂಟು..! ಆಹಾರದ ಮೆನುವಿಗೂ ಉಪಯೋಗವಾಗುತ್ತೆ ಅಳತೆ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೂ ಉಂಟು..! ಆಹಾರದ ಮೆನುವಿಗೂ ಉಪಯೋಗವಾಗುತ್ತೆ ಅಳತೆ ಪಟ್ಟಿ

Bengali wedding menu printed on ruler makes netizens go ROFL. Viral pics -  Trending News Newsಮದುವೆ ಅಂದ್ರೆ ಪ್ರತಿಯೊಬ್ಬರ ಜೀವನದಲ್ಲೂ ಒಂದು ವಿಶೇಷ ಸಂಭ್ರಮವಿರುತ್ತದೆ. ತಮ್ಮ ಮದುವೆಯನ್ನು ವಿಶೇಷವನ್ನಾಗಿಸಬೇಕು ಅನ್ನೋದು ಹಲವರ ಕನಸಾಗಿರುತ್ತದೆ. ಇದಕ್ಕಾಗಿ ಮದುವೆ ದಿನ ಗೊತ್ತು ಮಾಡಿದಂದಿನಿಂದಲೇ ಪೂರ್ವ ತಯಾರಿಯನ್ನು ಮಾಡಲಾಗುತ್ತದೆ. ವಧು-ವರರ ಉಡುಪಿನಿಂದ ಹಿಡಿದು ಅಲಂಕಾರದವರೆಗೆ ಬಹಳ ಸುಂದರವಾಗಿ ಆಯೋಜಿಸುತ್ತಾರೆ.

ಕೆಲವರು ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ವಿಭಿನ್ನವಾಗಿ ಮಾಡಿದ್ರೆ, ಇನ್ನೂ ಕೆಲವರು ಮದುವೆಯ ಊಟಕ್ಕೆ ಸಾಕಷ್ಟು ಪ್ರಾಶಸ್ತ್ಯ ಕೊಡುತ್ತಾರೆ. ಯಾವುದೇ ರೀತಿಯ ತೊಂದರೆಯಾಗದಂತೆ ಮದುವೆಗೆ ಬಂದ ಅತಿಥಿಗಳಿಗೆ ಹೊಟ್ಟೆ ತುಂಬಾ ಊಟ, ಹಾಗೂ ಸ್ಪೆಷಲ್ ಖಾದ್ಯಗಳನ್ನು ತಯಾರಿಸುತ್ತಾರೆ. ಇದಕ್ಕಾಗಿಯೇ ಕೆಲವರು ಮದುವೆಯ ಊಟದ ಮೆನುವನ್ನು ಕೂಡ ಪ್ರಿಂಟ್ ಮಾಡುತ್ತಾರೆ.

ಹೌದು, ಮದುವೆ ಊಟದಲ್ಲಿ ಏನೆಲ್ಲಾ ಸ್ಪೆಷಲ್ ಇರುತ್ತದೆ ಎಂಬುದನ್ನು ತಿಳಿಸಲು ಮುಂಚಿತವಾಗಿಯೇ ಕೆಲವರು ಕಾರ್ಡ್ ತಯಾರಿಸುತ್ತಾರೆ. ಆದರೆ, ಪಶ್ಚಿಮ ಬಂಗಾಳದಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಮೆನುವನ್ನು ಸ್ಕೇಲ್​ ಅಂದರೆ ಅಳತೆ ಪಟ್ಟಿಯ ಮೇಲೆ ಮುದ್ರಿಸಲಾಗಿದ್ದು, ಎಲ್ಲರ ಗಮನ ಸೆಳೆದಿದೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಭಾರಿ ವೈರಲ್ ಆಗಿದೆ.

ಅಂದಹಾಗೆ, ಇದು 2013ರಲ್ಲಿ ನಡೆದ ಮದುವೆ ಕಾರ್ಯಕ್ರಮದ ಮೆನುವಾಗಿದೆ. ಹಳೆ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಸುಶ್ಮಿತಾ ಹಾಗೂ ಅನಿಮೇಷ್​ ಎನ್​ ಸಿಲ್ಗುರಿ ಎಂಬವರ ವಿವಾಹದ ಮದುವೆ ಮೆನು ಇದಾಗಿದೆ. ಇವರ ವಿವಾಹದಲ್ಲಿ ಅತಿಥಿಗಳಿಗೆ ನೀಡಬೇಕಾದ ಮೆನು ಪಟ್ಟಿಯನ್ನು ಅಳತೆ ಪಟ್ಟಿಗಳ ಮೇಲೆ ಮುದ್ರಿಸಲಾಗಿತ್ತು.

ಈ ಅಳತೆ ಪಟ್ಟಿಯ ಮೇಲೆ ಬಂಗಾಳದ ಪ್ರಸಿದ್ಧ​ ಆಹಾರ ಪದಾರ್ಥಗಳಾದ ಫಿಶ್​ ಕಾಲಿಯಾ, ಫ್ರೈಡ್​ ರೈಸ್​, ಮಟನ್​ ಮಸಾಲಾ, ಹೀಗೆ ಹಲವಾರು ಬಗೆಯ ಖಾದ್ಯಗಳನ್ನು ಮುದ್ರಿಸಲಾಗಿದೆ. ಸ್ಕೇಲ್ ಅನ್ನು ಈ ರೀತಿಯಾಗಿಯೂ ಉಪಯೋಗಿಸಬಹುದಾ ಎಂದು ತಿಳಿದ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

— Stereotypewriter (@babumoshoy) January 9, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...