alex Certify ಇಂಜಿನಿಯರಿಂಗ್​​ ಪದವಿದರರಿಗೆ ಗುಡ್​ ನ್ಯೂಸ್​: ಈ ಹುದ್ದೆಗಳಿಗೆ BEL​​ನಲ್ಲಿ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಜಿನಿಯರಿಂಗ್​​ ಪದವಿದರರಿಗೆ ಗುಡ್​ ನ್ಯೂಸ್​: ಈ ಹುದ್ದೆಗಳಿಗೆ BEL​​ನಲ್ಲಿ ಅರ್ಜಿ ಆಹ್ವಾನ

ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​​ ಗುತ್ತಿಗೆ ಆಧಾರದ ಮೇಲೆ​ ಟ್ರೇನಿ ಹಾಗೂ ಪ್ರಾಜೆಕ್ಟ್​ ಇಂಜಿನಿಯರ್​ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಗ್ರಾ ಸ್ಮಾರ್ಟ್​ ಹೆಲ್ಪ್​ ಡೆಸ್ಕ್​ ಹಾಗೂ ಸ್ಮಾರ್ಟ್ಸ್​ ಸಿಟಿ ಬ್ಯುಸಿನೆಸ್​​​ ಎಸ್​ಬಿಯು, ಬೆಂಗಳೂರು ಸಂಕೀರ್ಣದಲ್ಲಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

bel-india.in ಅಧಿಕೃತ ವೆಬ್​ಸೈಟ್​ನಲ್ಲಿ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್​ 8 ಕೊನೆಯ ದಿನಾಂಕವಾಗಿದೆ.

ಟ್ರೇನಿ ಇಂಜಿನಿಯರ್​ 1 : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್​​ / ಎಲೆಕ್ಟ್ರಾನಿಕ್ಸ್​ & ಕಮ್ಯೂನಿಕೇಷನ್ಸ್​, ಎಲೆಕ್ಟ್ರಾನಿಕ್ಸ್​​ & ಟೆಲಿಕಮ್ಯೂನಿಕೇಷನ್ಸ್​​​/ ಕಮ್ಯೂನಿಕೇಷನ್ಸ್​ & ಕಂಪ್ಯೂಟರ್​ ಸೈನ್ಸ್​​​​​​​​​ ವಿಭಾಗದಲ್ಲಿ ಬಿಇ/ ಬಿ.ಟೆಕ್​ ಪದವಿಯನ್ನು ಹೊಂದಿರಬೇಕು.

ಪ್ರಾಜೆಕ್ಟ್​ ಇಂಜಿನಿಯರ್​ 1 : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್​​​/ ಎಲೆಕ್ಟ್ರಿಕಲ್​ & ಎಲೆಕ್ಟ್ರಾನಿಕ್ಸ್​ ವಿಭಾಗದಲ್ಲಿ ಬಿಇ/ಬಿ ಟೆಕ್​ ಪದವಿಯನ್ನು ಪಡೆದಿರಬೇಕು.

ಟ್ರೇನಿ ಇಂಜಿನಿಯರ್​ 1 : ಮೊದಲನೇ ವರ್ಷ 25 ಸಾವಿರ ರೂಪಾಯಿ, ಎರಡನೇ ವರ್ಷ 28 ಸಾವಿರ ರೂಪಾಯಿ ಹಾಗೂ ಮೂರನೇ ವರ್ಷ 31 ಸಾವಿರ ರೂಪಾಯಿ ವೇತನ ಸಿಗಲಿದೆ.

ಪ್ರಾಜೆಕ್ಟ್​ ಇಂಜಿನಿಯರ್​ 1 : ಮೊದಲನೇ ವರ್ಷ 35 ಸಾವಿರ ರೂಪಾಯಿ, ಎರಡನೇ ವರ್ಷ ಪ್ರತಿ 40 ಸಾವಿರ ರೂಪಾಯಿ ಹಾಗೂ ಮೂರನೇ ವರ್ಷ ಪ್ರತಿ ತಿಂಗಳು 50 ಸಾವಿರ ರೂಪಾಯಿ ವೇತನ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...