alex Certify ತ್ವಚೆಯ ಕಾಂತಿಯನ್ನ ಹೆಚ್ಚಿಸಲು ಸಹಕಾರಿ ಬಾಳೆ ಹಣ್ಣು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತ್ವಚೆಯ ಕಾಂತಿಯನ್ನ ಹೆಚ್ಚಿಸಲು ಸಹಕಾರಿ ಬಾಳೆ ಹಣ್ಣು….!

ಬಾಳೆಹಣ್ಣು ತಿನ್ನೋಕೆ ಎಷ್ಟೊಂದು ರುಚಿಕರವೋ ಆರೋಗ್ಯದ ದೃಷ್ಟಿಯಿಂದಲೂ ಸಹ ದೇಹಕ್ಕೆ ತುಂಬಾನೇ ಒಳ್ಳೆಯದು. ಬಾಳೆಹಣ್ಣಿನಲ್ಲಿ ಅಗಾಧ ಪ್ರಮಾಣದಲ್ಲಿ ಫೈಬರ್​ ಅಂಶ ಅಡಗಿದೆ. ಈ ಬಾಳೆ ಹಣ್ಣಿನ ಸೇವನೆಯಿಂದ ಜೀರ್ಣಶಕ್ತಿ ಕೂಡ ಸುಧಾರಿಸುತ್ತೆ. ಈ ಎಲ್ಲದರ ಜೊತೆಗೆ ಬಾಳೆಹಣ್ಣು ನೈಸರ್ಗಿಕ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡಬಲ್ಲುದು.

ಬಾಳೆಹಣ್ಣಿನಲ್ಲಿ ಪೊಟ್ಯಾಷಿಯಂ ಅಂಶ ಹೇರಳವಾಗಿದೆ. ಹೀಗಾಗಿ ನೀವು ಇದನ್ನ ಮಾಯಿಶ್ಚರೈಸರ್​ ರೀತಿಯಲ್ಲಿ ಬಳಕೆ ಮಾಡಬಹುದು. ಸಿಪ್ಪೆ ಸುಲಿದ ಬಾಳೆಹಣ್ಣನ್ನ ಚೆನ್ನಾಗಿ ಸ್ಮಾಶ್​ ಮಾಡಿ. ಇದನ್ನ ಮುಖಕ್ಕೆ ಹಚ್ಚಿಕೊಂಡು 5 ನಿಮಿಷಗಳ ಕಾಲ ಹಾಗೇ ಬಿಡಿ. ಬಳಿಕ ತಂಪಾದ ನೀರಿನಿಂದ ನಿಮ್ಮ ಮುಖವನ್ನ ತೊಳೆದುಕೊಳ್ಳಿ.

ಬಾಳೆಹಣ್ಣಿನ ಸಿಪ್ಪೆಯಲ್ಲಿ ಆಂಟಿಆಕ್ಸಿಡೆಂಟ್ ಅಂಶ ಅಡಗಿದೆ. ಇದು ನಿಮ್ಮ ಮುಖ ಕಾಂತಿಯುತವಾಗಿರಲು ಸಹಾಯ ಮಾಡುತ್ತೆ. ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರು ಬಾಳೆಹಣ್ಣಿನ ಸಿಪ್ಪೆಯಿಂದ ಮುಖಕ್ಕೆ ಮಸಾಜ್​ ಮಾಡಿಕೊಂಡಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ.

ಕಣ್ಣುಗಳು ಊದಿಕೊಳ್ಳುವ ಸಮಸ್ಯೆ ಇರುವವರಿಗೂ ಸಹ ಬಾಳೆ ಹಣ್ಣು ಪ್ರಯೋಜನಕಾರಿಯಾಗಿದೆ. ಸ್ಮ್ಯಾಶ್​ ಮಾಡಿದ ಬಾಳೆ ಹಣ್ಣನ್ನ ಊದಿಕೊಂಡ ಜಾಗದಲ್ಲಿ ಲೇಪಿಸಿ. ಇದಕ್ಕಾಗಿ ನೀವು ಬಾಳೆ ಹಣ್ಣಿನ ಸಿಪ್ಪೆಯನ್ನೂ ಬಳಕೆ ಮಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...