alex Certify ಆಸ್ತಿ ವಿಚಾರಕ್ಕೆ ಅಟ್ಟಾಡಿಸಿ ನಾಲ್ವರ ಮೇಲೆ ಹಲ್ಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ತಿ ವಿಚಾರಕ್ಕೆ ಅಟ್ಟಾಡಿಸಿ ನಾಲ್ವರ ಮೇಲೆ ಹಲ್ಲೆ

ಹಾಸನ: ಹಾಸನ ಜಿಲ್ಲೆ ಬೇಲೂರು ತಾಲೂಕಿನ ಮಾಳೆಗೆರೆ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಸಂಬಂಧಿಕರ ನಡುವೆ ಗಲಾಟೆ ನಡೆದಿದೆ.

ಮಚ್ಚು ಹಿಡಿದು ಅಟ್ಟಾಡಿಸಿ ಮಾರಣಾಂತಿಕವಾಗಿ ನಾಲ್ವರ ಮೇಲೆ ಹಲ್ಲೆ ನಡೆಸಲಾಗಿದೆ. ಮಲ್ಲೇಶಗೌಡ, ಶಶಿಕುಮಾರ್, ಗೌರೀಶ ಹಾಗೂ ತೀರ್ಥ ಎಂಬುವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಲ್ಲೇಶಗೌಡ ಅವರಿಗೆ ತಾಯಿಯಿಂದ ಬಂದಿದ್ದ 14 ಗುಂಟೆ ಪಿತ್ರಾರ್ಜಿತ ಆಸ್ತಿ ಇದ್ದು, 30 ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಮಳೆ ಬಂದ ಕಾರಣ ಅವರ ಮಕ್ಕಳಾದ ಶಶಿಕುಮಾರ್, ಗೌರೀಶ್ ಮತ್ತು ಸೊಸೆ ತೀರ್ಥ ಅವರೊಂದಿಗೆ ಮಲ್ಲೇಶಗೌಡ ಜಮೀನಿನಲ್ಲಿ ಉಳುಮೆ ಮಾಡುವಾಗ ಮಲ್ಲೇಶಗೌಡನ ಸಹೋದರನ ಮಕ್ಕಳಾದ ಮಧುಕುಮಾರ, ಚಂದ್ರೇಗೌಡ, ಕುಮಾರ, ಜವರೇಗೌಡ, ರುದ್ರೇಶ, ಲೋಕೇಶ ಅವರು ಇದು ತಮಗೆ ಸೇರಿದ ಜಾಗವೆಂದು ಬೈದಾಡಿ ಅಟ್ಟಾಡಿಸಿ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...