alex Certify ಆಂಟಿ ಬಯಾಟಿಕ್ ಸೇವಿಸುವ ಮುನ್ನ ಇರಲಿ ಎಚ್ಚರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಂಟಿ ಬಯಾಟಿಕ್ ಸೇವಿಸುವ ಮುನ್ನ ಇರಲಿ ಎಚ್ಚರ….!

ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಸೋಂಕು ಸಂಬಂಧಿ ಕಾಯಿಲೆಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಆಗ ನಿಮಗೆ ವೈದ್ಯರು ಆ್ಯಂಟಿ ಬಯಾಟಿಕ್ಸ್ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಹೇಳುತ್ತಾರೆ. ಮೂರರಿಂದ ಐದು ದಿನಗಳ ತನಕ ಈ ಮಾತ್ರೆಗಳನ್ನು ಸೇವಿಸುವಾಗ ನೀವು ಈ ಕೆಲವು ಅಂಶಗಳಿಂದ ದೂರವಿರುವುದು ಒಳ್ಳೆಯದು.

ಆ್ಯಂಟಿ ಬಯಾಟಿಕ್ ಮಾತ್ರೆಗಳನ್ನು ತೆಗೆದುಕೊಳ್ಳುವಾಗ ನೀವು ಮದ್ಯಪಾನ ಮಾಡದಿರಿ. ಮಾತ್ರೆ ತೆಗೆದುಕೊಂಡ 48 ಗಂಟೆ ಒಳಗೆ ಮದ್ಯಪಾನ ಮಾಡಿದರೆ ನಿಮ್ಮಲ್ಲಿ ತಲೆನೋವು, ವಾಕರಿಕೆ ಅಥವಾ ವಾಂತಿ, ಹೊಟ್ಟೆನೋವಿನಂಥ ಲಕ್ಷಣಗಳು ಕಂಡು ಬಂದಾವು.

ಆ್ಯಂಟಿ ಬಯಾಟಿಕ್ ಮಾತ್ರೆಗಳನ್ನು ಹಾಲಿನೊಂದಿಗೆ ಸೇವಿಸದಿರಿ. ಮಜ್ಜಿಗೆ ಮೊಸರು ಈ ಸಮಯದಲ್ಲಿ ದೂರವಿಡುವುದೇ ಒಳ್ಳೆಯದು. ಈ ಮಾತ್ರೆ ತಿಂದ ಕನಿಷ್ಠ ಮೂರು ಗಂಟೆಗಳ ಕಾಲ ಡೈರಿ ಉತ್ಪನ್ನಗಳನ್ನು ಸೇವಿಸದೆ ಇರುವುದು ಒಳ್ಳೆಯದು.

 ಮಾತ್ರೆಗಳನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಸೇವಿಸಿ. ಜ್ಯೂಸ್ ಜೊತೆ ತಿನ್ನುವ ಅಭ್ಯಾಸ ಇಟ್ಟುಕೊಳ್ಳದಿರಿ. ಕೆಲವರು ಇದರ ಕಹಿ ಹೋಗಲಾಡಿಸಲು ಸಕ್ಕರೆ ಅಥವಾ ಚಾಕೊಲೇಟ್ ಅನ್ನು ಬಾಯಿಗೆ ಹಾಕಿಕೊಳ್ಳುವುದುಂಟು. ಇದರಿಂದ ಬೇರೆಯದೇ ಅದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಈ ಸಮಯದಲ್ಲಿ ಹೆಚ್ಚು ಸಿಹಿ ಉತ್ಪನ್ನಗಳನ್ನು ಸೇವಿಸದಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...