alex Certify ಈ ಊರಿನಲ್ಲಿ ಬಾವಲಿಗಳಿಗೆ ಸಲ್ಲುತ್ತೆ ವಿಶೇಷ ಪೂಜೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಊರಿನಲ್ಲಿ ಬಾವಲಿಗಳಿಗೆ ಸಲ್ಲುತ್ತೆ ವಿಶೇಷ ಪೂಜೆ…!

ಕೊರೋನಾ ವೈರಸ್‌ನಿಂದಾಗಿ ಬಾವಲಿಗಳು ಕಳೆದ ಎರಡು ವರ್ಷಗಳಿಂದ ಮನುಕುಲದ ಸುದ್ದಿವಲಯದಲ್ಲಿ ನಕಾರಾತ್ಮಕ ಕಾರಣಗಳಿಗೆ ಸುದ್ದಿಯಲ್ಲಿವೆ.

ಆದರೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಜನರು ಈ ಸಸ್ತನಿಗಳನ್ನು ತಮ್ಮ ಮಕ್ಕಳ ರಕ್ಷಕರೆಂದು ಆರಾಧಿಸುತ್ತಾರೆ. ಜಿಲ್ಲೆಯ ರಾಮಚಂದ್ರಾಪುರಂ ಮಂಡಲದ ನಡವಲೂರಿನ ಜನರಿಗೆ ಬಾವಲಿಯಲ್ಲಿರುವ ವಿಶೇಷ ಶಕ್ತಿಯಿಂದ ತಮ್ಮ ಮಕ್ಕಳಿಗೆ ಒಳ್ಳೆಯ ಆರೋಗ್ಯ ಲಭಿಸುತ್ತಿದೆ ಎಂಬ ನಂಬಿಕೆಯಿದೆ.

ಇತಿಹಾಸ ನಿರ್ಮಿಸಿದ ಎಲೋನ್ ಮಸ್ಕ್: ಒಂದೇ ದಿನದಲ್ಲಿ 2.71 ಲಕ್ಷ ಕೋಟಿ ರೂ. ಗಳಿಕೆ

ಊರಿನ ಹುಣಸೆ ಮರಗಳ ಮೇಲೆ ಹೆಚ್ಚಿನ ಬಾವಲಿಗಳು ವಾಸವಿದ್ದು, ಈ ಮರಗಳೀಗ ಪೂಜಾ ತಾಣಗಳಾಗಿವೆ. ಹನ್ನೊಂದು ಹುಣಸೇಮರಗಳಿರುವ ಬಾವಲಿಗಳ ಈ ತಾಣಕ್ಕೆ ನಿಮ್ಮನ್ನು ಸ್ವಾಗತಿಸಲು ದ್ವಾರವೊಂದನ್ನು ಸಹ ಕಟ್ಟಲಾಗಿದೆ.

ಬಹಳ ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯದಲ್ಲಿ, ಅನಾರೋಗ್ಯಕ್ಕೆ ಬಾಧಿತರಾದ ಮಕ್ಕಳನ್ನು ಇಲ್ಲಿಗೆ ಕರೆತರುವ ಜನರು, ಅವರಿಗೆ ಸ್ನಾನ ಮಾಡಿಸಿ, ಮರಗಳ ಬೇರುಗಳಿಗೆ ಬಟ್ಟೆಗಳನ್ನು ಕಟ್ಟುತ್ತಾರೆ. ತಮ್ಮ ಮಕ್ಕಳಿಗೆ ಆರೋಗ್ಯವನ್ನು ಮರಳಿ ನೀಡಲು ಹೆತ್ತವರು ಬಾವಲಿಗಳಲ್ಲಿ ಪ್ರಾರ್ಥಿಸುತ್ತಾರೆ. ಬಾವಲಿಗಳಿಗೆ ತೊಂದರೆ ಕೊಡುವ ಮಂದಿಯನ್ನು ಮರಗಳಿಗೆ ಕಟ್ಟಿ ಏಟು ನೀಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...