alex Certify ಅಪರೂಪದ ಸ್ನೇಹಿತನ ಸ್ವಾಗತಕ್ಕೆ ಭಲ್ಲೆ ಭಲ್ಲೆ ನರ್ತನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ಸ್ನೇಹಿತನ ಸ್ವಾಗತಕ್ಕೆ ಭಲ್ಲೆ ಭಲ್ಲೆ ನರ್ತನ….!

ಬಹಳ ಸಮಯದ ನಂತರ ಸ್ನೇಹಿತರನ್ನು ಭೇಟಿಯಾದರೆ ಸಿಗುವ ಅನುಭೂತಿ ಹೇಳಲು ಸಾಧ್ಯವಿಲ್ಲ. ಅಂಥದ್ದೇ ಒಂದು ಅಪರೂಪದ ರೋಮಾಂಚನಕಾರಿ ವಿಡಿಯೋ ಒಂದು ಇಬ್ಬರು ಸ್ನೇಹಿತರ ಭೇಟಿಯಲ್ಲಿ ಆಗಿದ್ದು, ಅದರ ವಿಡಿಯೋ ವೈರಲ್​ ಆಗಿದೆ.

ಟ್ವಿಟರ್‌ನಲ್ಲಿ ‘UB1UB2’ ಎಂಬ ಬಳಕೆದಾರರು ಈ ವಿಡಿಯೋ ಹಂಚಿಕೊಂಡಿದ್ದು, ಇದು ಲಂಡನ್​ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಇಂಥದ್ದೊಂದು ರೋಮಾಂಚನಕಾರಿ ಭೇಟಿ ನಡೆದಿದೆ ಎಂದು ಹೇಳಿದ್ದಾರೆ.

ಸಿಖ್ ವ್ಯಕ್ತಿಯೊಬ್ಬರು ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಭಾಂಗ್ರಾ ನೃತ್ಯದ ಮೂಲಕ ತಮ್ಮ ಸ್ನೇಹಿತರನ್ನು ಸ್ವಾಗತಿಸುವ ವಿಡಿಯೋ ಇದಾಗಿದೆ. ಸ್ನೇಹಿತ ಬಂದ ತಕ್ಷಣ ಆತನನ್ನು ಸ್ವಾಗತಿಸಲು ಪಂಜಾಬಿ ಸಂಗೀತದಲ್ಲಿ ಭಲ್ಲೆ ಭಲ್ಲೆ ಮಾಡುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ನಂತರ ಇಬ್ಬರೂ ದೊಡ್ಡದಾಗಿ ನಗುತ್ತಾ ಅಪ್ಪಿಕೊಳ್ಳುತ್ತಾರೆ. ನಂತರ ಇಬ್ಬರೂ ಸಂತೋಷದಿಂದ ವಿಮಾನ ನಿಲ್ದಾಣದಿಂದ ಹೊರಡುವುದನ್ನು ಕಾಣಬಹುದು. ಸ್ನೇಹಿತರ ಈ ಅಪರೂಪದ ಮಿಲನದ ವಿಡಿಯೋ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...