alex Certify ಕೊರೆಯುವ ಚಳಿ ಹಿನ್ನೆಲೆ ಸುಪ್ರಸಿದ್ಧ ಬದರಿನಾಥ ದೇಗುಲ ಇಂದಿನಿಂದ ಬಂದ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೆಯುವ ಚಳಿ ಹಿನ್ನೆಲೆ ಸುಪ್ರಸಿದ್ಧ ಬದರಿನಾಥ ದೇಗುಲ ಇಂದಿನಿಂದ ಬಂದ್​….!

ಉತ್ತರಾಖಂಡ್​ನ ಬದರಿನಾಥ ದೇವಾಲಯವು ಚಳಿಗಾಲದ ವಿರಾಮ ಪಡೆಯಲು ಕ್ಷಣಗನೆ ಆರಂಭವಾಗಿದೆ. ತೀವ್ರ ಚಳಿಯ ಕಾರಣದಿಂದಾಗಿ ಇಂದು ಈ ದೇವಾಲಯವನ್ನು ಬಂದ್​ ಮಾಡುವ ಬಗ್ಗೆ ದಸರಾ ಹಬ್ಬದಂದೇ ಘೋಷಣೆ ಮಾಡಲಾಗಿತ್ತು. ದೇಗುಲವನ್ನು ಮುಚ್ಚಲು ಸಿದ್ಧತೆ ಭರದಿಂದ ಸಾಗಿದ್ದು 20 ಕ್ವಿಂಟಾಲ್​ ಚೆಂಡು ಹೂವು, ಕಮಲ ಸೇರಿದಂತೆ ವಿವಿಧ ಹೂವುಗಳನ್ನು ತರಿಸಲಾಗಿದೆ. ದೇಗುಲದ ಪೋರ್ಟಲ್​​ಗಳು ಇಂದು ಸಂಜೆ 6:45ಕ್ಕೆ ಬಂದ್​ ಆಗಲಿದೆ.

ವಿಜಯದಶಮಿಯಂದೇ ಚಳಿಗಾಲಕ್ಕೆ ದೇಗುಲ ಮುಚ್ಚುವ ಬಗ್ಗೆ ಘೋಷಣೆ ಮಾಡಲಾಗಿತ್ತು. ವಾರ್ಷಿಕ ಸಮಾರೋಪ ಸಮಾರಂಭ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬದರಿನಾಥ ದೇಗುಲಕ್ಕೆ ಆಗಮಿಸಿದ್ದಾರೆ.

ಕೇದಾರನಾಥ ಹಾಗೂ ಯಮುನೋತ್ರಿಯ ಬಾಗಿಲುಗಳನ್ನು ನವೆಂಬರ್​ 6ರಂದು ಮುಚ್ಚಲಾಗಿದೆ. ತುಂಗನಾಥ ದೇವಾಲಯವು ಚಳಿಗಾಲದ ಹಿನ್ನೆಲೆಯಲ್ಲಿ ಅಕ್ಟೋಬರ್​ 30ರಿಂದ ಬಂದ್​ ಆಗಿದೆ. ಕೇದಾರ ಶ್ರೀ ಮದ್ಮಮಹೇಶ್ವರ ದೇವಾಲಯವು ನವೆಂಬರ್​ 22ರಂದು ಮುಚ್ಚಲಿದೆ. ಹಾಗೂ ನವೆಂಬರ್​ 25ರಂದು ಮದ್ಮಮಹೇಶ್ವರ ಜಾತ್ರೆ ಕೂಡ ನಡೆಯಲಿದೆ.

ನೈನಿತಾಲ್​ ಹೈಕೋರ್ಟ್ ತೀರ್ಥಯಾತ್ರೆಯ ಮೇಲಿನ ನಿಷೇಧವನ್ನು ತೆರವುಗೊಳಿಸಿದ ಬಳಿಕ ಈ ವರ್ಷದ ಸೆಪ್ಟೆಂಬರ್​ 18ರಿಂದ ದೇಗುಲ ದರ್ಶನ ಆರಂಭವಾಗಿದೆ. ಚಾರ್​ ದೇಗುಲಗಳಿಗೆ ಈವರೆಗೆ 1.14 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಭೇಟಿ ನೀಡಿದ್ದಾರೆ. ಭಕ್ತಾದಿಗಳ ದೈನಂದಿನ ಮಿತಿಯನ್ನು ಬದರಿನಾಥಕ್ಕೆ 1 ಸಾವಿರ, ಕೇದಾರನಾಥಕ್ಕೆ 800, ಗಂಗೋತ್ರಿಗೆ 600 ಹಾಗೂ ಯಮುನೋತ್ರಿಗೆ 400ಕ್ಕೆ ನಿರ್ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...