alex Certify ಅಚ್ಚರಿಗೊಳಿಸುತ್ತೆ ಈ ಬ್ಯಾಕ್ ​ಪ್ಯಾಕ್​ ಹೆಲಿಕಾಪ್ಟರ್ ಹಾರಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೊಳಿಸುತ್ತೆ ಈ ಬ್ಯಾಕ್ ​ಪ್ಯಾಕ್​ ಹೆಲಿಕಾಪ್ಟರ್ ಹಾರಾಟ

ಆಕಾಶದಲ್ಲಿ ಗೊಂಬೆಗಳು ಹಾರಾಡುವಂತ ಸಾಕಷ್ಟು ವಿಡಿಯೋಗಳನ್ನ ನೀವು ನೋಡಿರ್ತಿರಾ. ಆದರೆ ಎಂದಾದರೂ ಮಾನವ ಕೂಡ ನಿಜ ಜೀವನದಲ್ಲಿ ಈ ರೀತಿ ಹಾರಾಡೋಕೆ ಸಾಧ್ಯವಾ ಎಂದು ಯೋಚನೆ ಮಾಡಿದ್ದೀರಾ..?ಆದರೆ ಈ ಮಾತು ಕೂಡ ನಿಜವಾಗಿದೆ. ಮನುಷ್ಯರು ಸಹ ಆಕಾಶದಲ್ಲಿ ಹಾರಾಡೋಕೆ ವಿಶೇಷ ಸಾಧನವೊಂದನ್ನ ಕಂಡುಹಿಡಿಯಲಾಗಿದೆ.

ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಬ್ಯಾಕ್​‌ ಪ್ಯಾಕ್​ ಹೆಲಿಕಾಪ್ಟರ್​​ನ್ನು ಕಂಡು ಹಿಡಿಯಲಾಗಿದ್ದು ಆಸ್ಟ್ರೇಲಿಯಾದ ಸಮುದ್ರವೊಂದರ ಬಳಿ ಪ್ರಯೋಗ ಪರೀಕ್ಷೆ ನಡೆಸಿದೆ.

ಈ ವಿಡಿಯೋದ ತುಣುಕಿನಲ್ಲಿ ಪೈಲಟ್​​ ಸುರಕ್ಷಾ ಧಿರಿಸು ಹಾಗೂ ಹೆಲ್ಮೆಟ್​ ಧರಿಸಿ ಬೆನ್ನಿಗೆ ಬ್ಯಾಕ್​ ಪ್ಯಾಕ್​ ಹೆಲಿಕಾಪ್ಟರ್​ ಹಾಕಿಕೊಂಡು ಹಾರಾಡುತ್ತಿರೋದನ್ನ ನೀವು ಕಾಣಬಹುದಾಗಿದೆ. ಈ ಬ್ಯಾಕ್ ​ಪ್ಯಾಕ್​ ಹೆಲಿಕಾಪ್ಟರ್​​ಗೆ ಕಾಪ್ಟರ್​ಪ್ಯಾಕ್​ ಎಂದು ಹೆಸರಿಡಲಾಗಿದೆ.

ಬ್ಯಾಕ್​ ಪ್ಯಾಕ್​ ಹೆಲಿಕಾಪ್ಟರ್​ಗಳನ್ನ ಮನುಷ್ಯನ ಬೆನ್ನಿಗೆ ಅಳವಡಿಸಲಾಗುತ್ತೆ. ಇವುಗಳ ಮೋಟಾರ್​ನ ಸಹಾಯದಿಂದ ಚಲಿಸುತ್ತವೆ. ಈ ಹೆಲಿಕಾಪ್ಟರ್​ಗೆ ಎರಡು ಟರ್ಬೈನ್​ಗಳನ್ನ ಇರಿಸಲಾಗಿದೆ.ಇದರ ಸಹಾಯದಿಂದ ಪೈಲಟ್​ ಆಗಸದಲ್ಲಿ ಹಾರಾಡಬಲ್ಲ. ಈ ಹೆಲಿಕಾಪ್ಟರ್​ನ್ನು ಕಾರ್ಬನ್​ ಫೈಬರ್​​ ಹನಿಕೋಂಬ್​​ನಿಂದ ಸಿದ್ಧಪಡಿಸಲಾಗಿದೆ. ಇದು ಒಂದು ರೀತಿಯಲ್ಲಿ ಪ್ಯಾರಾಚೂಟ್​ನಂತೆಯೇ ಕಾರ್ಯನಿರ್ವಹಿಸುತ್ತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...