alex Certify ಈ ಬಿಳಿ ಆಹಾರಗಳನ್ನು ದೂರವಿಟ್ಟರೆ ತಂತಾನೇ ಕಡಿಮೆಯಾಗುತ್ತೆ ತೂಕ ಮತ್ತು ಬೊಜ್ಜು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಬಿಳಿ ಆಹಾರಗಳನ್ನು ದೂರವಿಟ್ಟರೆ ತಂತಾನೇ ಕಡಿಮೆಯಾಗುತ್ತೆ ತೂಕ ಮತ್ತು ಬೊಜ್ಜು…!

ಸದ್ಯ ಜಗತ್ತನ್ನೇ ಕಾಡುತ್ತಿರುವ ಅನೇಕ ಸಾಂಕ್ರಾಮಿಕ ರೋಗಗಳ ಜೊತೆಗೆ ಬೊಜ್ಜು ಕೂಡ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ತಪ್ಪಾದ ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆಯಿಂದಾಗಿ ಅನೇಕರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜಂಕ್ ಫುಡ್‌ಗಳ ಅತಿಯಾದ ಸೇವನೆ ಕೂಡ ಇದಕ್ಕೆ ಕಾರಣ. ಇದರಿಂದ ಹೊಟ್ಟೆಯ ಕೊಬ್ಬು ವೇಗವಾಗಿ ಹೆಚ್ಚುತ್ತಿದೆ. ಆಹಾರದಲ್ಲಿ ಬೊಜ್ಜು ಹೆಚ್ಚಿಸುವ ಕೆಲವು ವಸ್ತುಗಳನ್ನು ಸಕಾಲದಲ್ಲಿ ತಪ್ಪಿಸಿದರೆ ಬೊಜ್ಜಿನ ಪ್ರಮಾಣವನ್ನು ನಿಲ್ಲಿಸಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಕೆಲವು ಬಿಳಿ ಆಹಾರಗಳು ತ್ವರಿತ ತೂಕ ಹೆಚ್ಚಾಗಲು ಕಾರಣವೆಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆ ಬಿಳಿ ವಸ್ತುಗಳ ಸೇವನೆಯನ್ನು ಕಡಿಮೆ ಮಾಡಿದರೆ ತಂತಾನೇ ತೂಕ ಇಳಿಸಬಹುದು.  

ಅಕ್ಕಿ (ಬಿಳಿ ಅಕ್ಕಿ) ಬೊಜ್ಜಿನ ಸಮಸ್ಯೆ ಇರುವವರು ಅನ್ನವನ್ನು ಕಡಿಮೆ ತಿನ್ನಬೇಕು. ಬಿಳಿ ಅಕ್ಕಿಯನ್ನು ಪಾಲಿಶ್ ಮಾಡಿರುವುದರಿಂದ, ಅದರ ಸೇವನೆಯಿಂದ ಬೊಜ್ಜು ವೇಗವಾಗಿ ಹೆಚ್ಚಾಗುತ್ತದೆ. ಅದಕ್ಕಾಗಿಯೇ ಬಿಳಿ ಅಕ್ಕಿಯಿಂದ ಮಾಡಿದ ಅನ್ನವನ್ನು ಸೇವನೆ ಮಾಡಬೇಡಿ. ಅದರ ಬದಲು ಬ್ರೌನ್‌ ರೈಸ್‌ ತಿನ್ನಬಹುದು.

 ಸಕ್ಕರೆ (ಬಿಳಿ ಸಕ್ಕರೆ)ಸ್ಥೂಲಕಾಯಕ್ಕೆ ಸಕ್ಕರೆ ಎರಡನೇ ದೊಡ್ಡ ಕಾರಣ. ಹೆಚ್ಚು ಸಕ್ಕರೆ ಸೇವನೆಯಿಂದ ಬೊಜ್ಜು ವೇಗವಾಗಿ ಹೆಚ್ಚಾಗುತ್ತದೆ. ಬಿಳಿ ಸಕ್ಕರೆ ದೇಹದ ತೂಕವನ್ನು ವೇಗವಾಗಿ ಹೆಚ್ಚಿಸುತ್ತದೆ. ನೀವು ಸಿಹಿತಿಂಡಿಗಳನ್ನು ತಿನ್ನಲು ಬಯಸಿದರೆ ಹಣ್ಣುಗಳು ಮತ್ತು ಜ್ಯೂಸ್‌ ಕುಡಿಯಿರಿ. ಏಕೆಂದರೆ ಅವುಗಳು ನೈಸರ್ಗಿಕ ಸಿಹಿಯನ್ನು ಹೊಂದಿರುತ್ತವೆ. ಆದರೆ ಸಕ್ಕರೆ ದೇಹಕ್ಕೆ ಹಾನಿಕಾರಕ.  

ಬಿಳಿ ಬ್ರೆಡ್ಅನೇಕ ಜನರು ಬಿಳಿ ಬ್ರೆಡ್‌ ಅನ್ನು ಬೆಳಗಿನ ಉಪಹಾರಕ್ಕೆ ಸೇವಿಸುತ್ತಾರೆ. ಹೊಟ್ಟೆಯ ಕೊಬ್ಬನ್ನು ನಿಯಂತ್ರಿಸಲು ಬಯಸಿದರೆ ಬಿಳಿ ಬ್ರೆಡ್ ಅನ್ನು ದೂರವಿಡಬೇಕು. ಇದು ಬೊಜ್ಜನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಉಂಟುಮಾಡುತ್ತದೆ. ಸಂಪೂರ್ಣ ಗೋಧಿ ಬ್ರೆಡ್ ಅಥವಾ ಬ್ರೌನ್ ಬ್ರೆಡ್ ಅನ್ನು ತಿನ್ನಬೇಕು.

ಮೈದಾ ಹಿಟ್ಟು – ಮೈದಾ ಹಿಟ್ಟಿನಿಂದ ತಯಾರಿಸಿದ ಕರಿದ ತಿನಿಸುಗಳು ಬೊಜ್ಜನ್ನು ಬಹುಬೇಗ ಹೆಚ್ಚಿಸುತ್ತವೆ. ಮೈದಾ ಸಂಸ್ಕರಿಸಿದ ಹಿಟ್ಟು ಮತ್ತು ಕೊಲೆಸ್ಟ್ರಾಲ್ ಹೆಚ್ಚಿಸುವ ಗುಣಗಳನ್ನು ಹೊಂದಿದೆ. ಆಹಾರದಲ್ಲಿ ಅದರ ಸೇವನೆಯನ್ನು ಕಡಿಮೆ ಮಾಡಿದರೆ, ಆರೋಗ್ಯವು ಚೆನ್ನಾಗಿರುತ್ತದೆ.

ಹಾಲಿನ ಉತ್ಪನ್ನಗಳುಡೈರಿ ಉತ್ಪನ್ನಗಳು ಉತ್ತಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆದರೆ  ಅವುಗಳ ಅತಿಯಾದ ಸೇವನೆಯು ತೂಕವನ್ನು ಹೆಚ್ಚಿಸಬಹುದು. ಆದ್ದರಿಂದ ಪನೀರ್, ಚೀಸ್ ಮತ್ತು ಬೆಣ್ಣೆಯಂತಹ ಪದಾರ್ಥಗಳನ್ನು ಕಡಿಮೆ ಸೇವಿಸಿ. ಈ ಮೂಲಕ ಹೆಚ್ಚುತ್ತಿರುವ ಸ್ಥೂಲಕಾಯತೆಯನ್ನು ನಿಯಂತ್ರಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...