alex Certify ಗಲ್ಲಾ ಪೆಟ್ಟಿಗೆಯಲ್ಲಿ ಚಿಂದಿ ಉಡಾಯಿಸಿದ ಅವತಾರ್​-2: ಒಂದೇ ದಿನ 41 ಕೋಟಿ ರೂ. ಗಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಲ್ಲಾ ಪೆಟ್ಟಿಗೆಯಲ್ಲಿ ಚಿಂದಿ ಉಡಾಯಿಸಿದ ಅವತಾರ್​-2: ಒಂದೇ ದಿನ 41 ಕೋಟಿ ರೂ. ಗಳಿಕೆ

ಅವತಾರ್ ಬಿಡುಗಡೆಯಾದ 3 ವರ್ಷಗಳ ನಂತರ, ಅದರ ಮುಂದುವರಿದ ಭಾಗ, ಅವತಾರ್: ದಿ ವೇ ಆಫ್ ವಾಟರ್ ಶುಕ್ರವಾರ, ಡಿಸೆಂಬರ್ 16 ರಂದು ಥಿಯೇಟರ್‌ಗಳಲ್ಲಿ ನಾಗಾಲೋಟದಿಂದ ಓಡುತ್ತಿದೆ. ಆರಂಭದ ದಿನದಲ್ಲಿಯೇ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡುತ್ತಿದೆ ಈ ಚಿತ್ರ.

ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ವರದಿ ಮಾಡಿದಂತೆ, ಅವತಾರ್ 2 ಭಾರತದಲ್ಲಿ ತನ್ನ ಆರಂಭಿಕ ದಿನದಂದು 41 ಕೋಟಿ ರೂಪಾಯಿ ಗಳಿಸಿದೆ.

ಇದರೊಂದಿಗೆ, ಅವತಾರ್: ದಿ ವೇ ಆಫ್ ವಾಟರ್ ಸ್ಪೈಡರ್ ಮ್ಯಾನ್, ಅವೆಂಜರ್ಸ್ ಇನ್ಫಿನಿಟಿ ವಾರ್ ಮತ್ತು ಡಾಕ್ಟರ್ ಸ್ಟಾಂಜರ್ ಅನ್ನು ಹಿಂದಿಕ್ಕಿ ಭಾರತದಲ್ಲಿ ಎರಡನೇ ಅತಿ ಹೆಚ್ಚು ಹಾಲಿವುಡ್ ಓಪನರ್ ಆಗಿದೆ.

ಸ್ಪೈಡರ್ ಮ್ಯಾನ್ ಮೊದಲ ದಿನವೇ 32.67 ಕೋಟಿ ಗಳಿಸಿದ್ದರೆ, ಅವೆಂಜರ್ಸ್ ಇನ್ಫಿನಿಟಿ ವಾರ್ ಮತ್ತು ಡಾಕ್ಟರ್ ಸ್ಟ್ರೇಂಜ್ ಕ್ರಮವಾಗಿ 31.30 ಕೋಟಿ ಮತ್ತು 27.50 ಕೋಟಿ ಗಳಿಸಿದ್ದವು.

ಜೇಮ್ಸ್ ಕ್ಯಾಮರೂನ್ ನಿರ್ದೇಶಿಸಿದ, ಅವತಾರ್: ದಿ ವೇ ಆಫ್ ವಾಟರ್ ಸ್ಯಾಮ್ ವರ್ಥಿಂಗ್ಟನ್, ಜೊ ಸಲ್ಡಾನಾ, ಸಿಗೌರ್ನಿ ವೀವರ್, ಕೇಟ್ ವಿನ್ಸ್ಲೆಟ್ ಮತ್ತು ಸ್ಟೀಫನ್ ಲ್ಯಾಂಗ್ ಇತರರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...