alex Certify ಉದ್ಯೋಗ ಅರಸಿ 3,000ಕಿಮೀ ದೂರದಿಂದ ಬಂದು, ಈ ಕಾರಣದಿಂದ ಕೆಲಸ ಕಳೆದುಕೊಂಡ ನತದೃಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗ ಅರಸಿ 3,000ಕಿಮೀ ದೂರದಿಂದ ಬಂದು, ಈ ಕಾರಣದಿಂದ ಕೆಲಸ ಕಳೆದುಕೊಂಡ ನತದೃಷ್ಟ

ಹೊಸ ಕೆಲಸವೊಂದನ್ನು ಅರಸಿ ನೀವು ನಿಮ್ಮ ಕುಟುಂಬ ಸಮೇತ ದೇಶದ ಒಂದು ಭಾಗದಿಂದ ಬೇರೊಂದು ಭಾಗಕ್ಕೆ 3,000ಕಿಮೀ ದೂರ ಪ್ರಯಾಣಿಸಿದ್ದೇ ಆದಲ್ಲಿ ಏನೆಲ್ಲಾ ಆಲೋಚನೆ ಇಟ್ಟುಕೊಂಡು ಹೋಗಿರುತ್ತೀರಿ ಅಲ್ಲವೇ? ಇಷ್ಟೆಲ್ಲಾ ಆದ ಮೇಲೆ ಹೊಸ ಕೆಲಸವೊಂದನ್ನು ಸೇರಿ ಬರೀ ಎರಡು ಗಂಟೆಗಳ ಬಳಿಕ ನೀವು ತುಂಬಾ ದಪ್ಪಗಿದ್ದೀರಿ ಎಂಬ ಕಾರಣವೊಡ್ಡಿ ನಿಮ್ಮನ್ನು ಕೆಲಸದಿಂದ ಕಿತ್ತು ಹಾಕಿಬಿಟ್ಟರೆ ಏನು ಅನಿಸೋದಿಲ್ಲ?

ಇಂಥದ್ದೇ ಹೃದಯವಿದ್ರಾವಕ ಸನ್ನಿವೇಶ ಆಸ್ಟ್ರೇಲಿಯಾದ ಹ್ಯಾಮಿಶ್ ಗ್ರಿಫಿನ್ ಮತ್ತು ಆತನ ಮಡದಿ ಹೇಜ಼ಲ್ ಗ್ರಿಫಿನ್‌ರದ್ದು. ತಮ್ಮ ಪುತ್ರ ಫ್ರೆಡ್ಡಿ ಮತ್ತು ಮಡದಿಯೊಂದಿಗೆ ಟಾಸ್ಮೇನಿಯಾಗೆ ಬಂದು ಹೊಸ ಕೆಲಸ ಕಂಡುಕೊಂಡಿದ್ದ ಹ್ಯಾಮಿಶ್‌ರನ್ನು ಆತನ ಉದ್ಯೋಗದಾತ ಸಂಸ್ಥೆ ಬಿಗ್‌4 ಹಾಲಿಡೇ ಪಾರ್ಕ್ಸ್ ಕೆಲಸದಿಂದ ಕಿತ್ತೊಗೆದಿದೆ.

OMG: 10 ಬಾಲ್‌ ಗಳಲ್ಲಿ 5 ವಿಕೆಟ್‌ – ಕೇವಲ 3 ರನ್…!

ಈತ ತೀರಾ ದಪ್ಪಗಿದ್ದ ಕಾರಣ ಲಾನ್‌ಮೋವರ್‌ಅನ್ನು ಚಲಿಸುವುದಾಗಲೀ ಅಥವಾ ಏಣಿಯನ್ನು ಏರುವುದಾಗಲೀ ಸಾಧ್ಯವಿಲ್ಲ ಎಂಬ ಕಾರಣವನ್ನು ಈತ ಫೈರಿಂಗ್‌ಗೆ ಕೊಟ್ಟಿದೆ ಕಂಪನಿ.

ಕ್ವೀನ್ಸ್‌ಲೆಂಡ್‌ನಲ್ಲಿ ಪಾರ್ಕ್‌ ಮ್ಯಾನೇಜರ್‌ ಆಗಿ ಎಂಟು ವರ್ಷಗಳ ಕಾಲ ಕೆಲಸ ಮಾಡಿದ ಅನುಭವಿರುವುದಾಗಿ ಹೇಳುವ ಹ್ಯಾಮಿಶ್, ತಮಗಾದ ಈ ಅನುಭವದಿಂದ ಶಾಕ್ ಆಗಿರುವುದಾಗಿ ತಿಳಿಸಿದ್ದಾರೆ.

ತಮ್ಮ ಆರೋಗ್ಯದ ವಿಚಾರವಾಗಿ ಸುಳ್ಳು ಹೇಳಿದ್ದಾರೆ ಎಂಬ ಕಾರಣವನ್ನು ಆತನ ಫೈರಿಂಗ್ ಮಾಡಿದ್ದಕ್ಕೆ ಕೊಟ್ಟುಕೊಂಡಿದೆ ಬಿಗ್‌4.

ಈ ನೋವಿನ ಅನುಭವದ ಬಳಿಕ, ಹೊಸ ಊರಿನಲ್ಲಿ ಹೆಚ್ಚು ದಿನ ಕಳೆಯಲು ಸಾಧ್ಯವಾಗದೇ ಗ್ರಿಫಿನ್ ತಮ್ಮ ಮಡದಿ ಹಾಗೂ ಮಗನೊಂದಿಗೆ ತಮ್ಮ ಊರಿಗೆ ಮರಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...