alex Certify ಜೋಶ್ ಇಂಗ್ಲಿಸ್ ಸ್ಪೋಟಕ ಶತಕ: ಮೊದಲ ಟಿ20ಯಲ್ಲಿ ಭಾರತ ಗೆಲುವಿಗೆ ಬೃಹತ್ ಮೊತ್ತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೋಶ್ ಇಂಗ್ಲಿಸ್ ಸ್ಪೋಟಕ ಶತಕ: ಮೊದಲ ಟಿ20ಯಲ್ಲಿ ಭಾರತ ಗೆಲುವಿಗೆ ಬೃಹತ್ ಮೊತ್ತ

ವಿಶಾಖಪಟ್ಟಣ: ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಭರ್ಜರಿ ಜಯಗಳಿಸಿ ಚಾಂಪಿಯನ್ ಆದ ಆಸ್ಟ್ರೇಲಿಯಾ ಇಂದು ಮೊದಲ ಟಿ20 ಪಂದ್ಯದಲ್ಲಿ ಬೃಹತ್ ಮೊತ್ತ ಕಲೆ ಹಾಕಿದೆ.

ವಿಶಾಖ ಪಟ್ಟಣದ ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿದೆ. ಜೋಶ್ ಇಂಗ್ಲಿಸ್ ಸ್ಪೋಟಕ ಶತಕ ಸಿಡಿಸಿದ್ದಾರೆ. 50 ಎಸೆತಗಳಲ್ಲಿ 11 ಬೌಂಡರಿ, 8 ಸಿಕ್ಸರ್ ಸಹಿತ 110 ರನ್ ಗಳಿಸಿದ್ದಾರೆ.

ಸ್ಟೀವನ್ ಸ್ಮಿತ್ 52, ಮ್ಯಾಥ್ಯೂ ಶಾರ್ಟ್ 13, ಜೋಶ್ ಇಂಗ್ಲಿಸ್ 110, ಮಾರ್ಕಸ್ ಸ್ಟೋನಿಯಸ್ ಅಜೇಯ 7, ಟಿಮ್ ಡೇವಿಡ್ ಅಜೇಯ 19 ರನ್ ಗಳಿಸಿದರು. ಭಾರತದ ಪರ ಪ್ರಸಿದ್ಧ್ ಕೃಷ್ಣ 1, ರವಿ ಬಿಷ್ಣೊಯಿ 1 ವಿಕೆಟ್ ಪಡೆದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...