alex Certify ಡಾನ್ಸ್ ಮಾಡುತ್ತಾ ಎಡವಿ ಪುಟ್ಟ ಬಾಲಕನ ಮೇಲೆ ಬಿದ್ದ ದಢೂತಿ ಮಹಿಳೆ..! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಾನ್ಸ್ ಮಾಡುತ್ತಾ ಎಡವಿ ಪುಟ್ಟ ಬಾಲಕನ ಮೇಲೆ ಬಿದ್ದ ದಢೂತಿ ಮಹಿಳೆ..! ವಿಡಿಯೋ ವೈರಲ್

ಭಾರತೀಯ ವಿವಾಹಗಳಲ್ಲಿ ನೃತ್ಯ ಇಲ್ಲದೆ ವಿವಾಹ ಪೂರ್ಣ ಎಂದೆನಿಸುವುದಿಲ್ಲ. ವಧು-ವರರ ಸಂಬಂಧಿಕರು ಮದುವೆಯಲ್ಲಿ ಕುಣಿದು ಕುಪ್ಪಳಿಸುತ್ತಾರೆ. ಇದೇನು ಹೊಸದಲ್ಲ. ಆದರೆ, ಈಗ ವೈರಲ್ ಆಗಿರುವ ವಿಡಿಯೋ ನೋಡಿದ್ರೆ ಖಂಡಿತಾ ನೀವು ಬಿದ್ದು ಬಿದ್ದು ನಗೋದ್ರಲ್ಲಿ ಸಂಶಯವೇ ಇಲ್ಲ.

ಹೌದು, ಸಮಾರಂಭದಲ್ಲಿ ಮಹಿಳೆಯರ ಗುಂಪೊಂದು ಹರ್ಯಾನ್ವಿ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಕಿತ್ತಳೆ ಬಣ್ಣದ ಸೀರೆ ಉಟ್ಟಿದ್ದ ದಪ್ಪಗಿನ ಮಹಿಳೆಯೊಬ್ಬರು ಕೂಡ ಹಾಡಿಗೆ ಸಖತ್ ಆಗಿಯೇ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಬಾಲಕನೊಬ್ಬ ಡಾನ್ಸ್ ಮಾಡುತ್ತಾ ಆಕೆಯ ಹಿಂದೆ ಹೋಗಿದ್ದಾನೆ. ಈ ವೇಳೆ ಆಯತಪ್ಪಿ ಮಹಿಳೆ ಬಾಲಕನ ಮೇಲೆಯೇ ಎಡವಿ ಬಿದ್ದಿದ್ದಾರೆ.

ಕೆಲವು ಮಹಿಳೆಯರು ಬಂದು ಮಹಿಳೆಗೆ ಎದ್ದೇಳಲು ಸಹಾಯ ಮಾಡುತ್ತಾರೆ. ಇತರರು ದೃಶ್ಯ ನೋಡಿ ನಗುತ್ತಾರೆ. ಬಾಲಕನ ತಾಯಿ ಆತನನ್ನು ನೆಲದಿಂದ ಎತ್ತಿಕೊಂಡು ಅಳುತ್ತಿರುವ ತನ್ನ ಮಗನನ್ನು ಸಮಾಧಾನಪಡಿಸುತ್ತಾಳೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ಸಾವಿರಾರು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...