alex Certify ಚಾಕೋಲೆಟ್ ಆಸೆ ತೋರಿಸಿ ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಕೋಲೆಟ್ ಆಸೆ ತೋರಿಸಿ ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ….!

ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳಿಗೆ ಕೊನೆಯೇ ಇಲ್ಲ ಎಂಬಂತಾಗಿದೆ. ಆನೇಕಲ್​ನಲ್ಲಿ ಚಾಕಲೇಟ್​ ಕೊಡಿಸುವ ನೆಪದಲ್ಲಿ ಬುದ್ಧಿಮಾಂದ್ಯ ಬಾಲಕಿಯ ಮೇಲೆ ಕಾಮುಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಕಾಮುಕ ಚಂದ್ರಪ್ಪ ಎಂಬಾತನನ್ನು ಬಂಧಿಸುವಲ್ಲಿ ಸೂರ್ಯಸಿಟಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮನೆಯ ಬಳಿ ಆಟವಾಡುತ್ತಿದ್ದ ಬುದ್ದಿಮಾಂದ್ಯ ಬಾಲಕಿಗೆ ಚಾಕಲೇಟ್​ ಆಸೆ ತೋರಿಸಿದ ಕಾಮುಕ ಚಂದ್ರಪ್ಪ ಪಾಳು ಮನೆಯೊಂದರ ಬಳಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಬಾಲಕಿಯನ್ನು ಕಾಪಾಡಿದ್ದು ಆರೋಪಿಯನ್ನು ಸೂರ್ಯಸಿಟಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೊದಲೇ ಬಾಲಕಿ ಬುದ್ಧಿಮಾಂದ್ಯೆಯಾಗಿದ್ದಳು. ಈ ಘಟನೆಯ ಬಳಿಕ ಬಾಲಕಿ ಇನ್ನಷ್ಟು ಆಘಾತಕ್ಕೆ ಒಳಗಾಗಿದ್ದಾಳೆ. ಭಯಗೊಂಡು ಸ್ನಾನಗೃಹದ ಬಾಗಿಲು ಹಾಕಿಕೊಂಡು ಕುಳಿತಿದ್ದಳು ಎನ್ನಲಾಗಿದೆ. ಬಾಗಿಲು ತೆರೆಯಲು ಹೋದಾಗ ಬಾಲಕಿಯ ತಲೆಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಮುಕ ಚಂದ್ರಪ್ಪ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...